ಎಲ್ಗಾರ್ ಪರಿಷದ್ ಪ್ರಕರಣ: ವರವರ ರಾವ್ ಜಾಮೀನು ಅರ್ಜಿ ತಿರಸ್ಕೃತ

Update: 2019-04-30 14:16 GMT

ಪುಣೆ, ಎ.30: ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಬಂಧನಲ್ಲಿರುವ ಸಾಮಾಜಿಕ ಹೋರಾಟಗಾರ ಮತ್ತು ಕವಿ ವರವರ ರಾವ್ ಸಲ್ಲಿಸಿರುವ ತಾತ್ಕಾಲಿಕ ಜಾಮೀನು ಅರ್ಜಿಯನ್ನು ಪುಣೆಯ ನ್ಯಾಯಾಲಯ ತಿರಸ್ಕರಿಸಿದೆ. ಎಪ್ರಿಲ್ 22ರಂದು ನಿಧನರಾದ ತನ್ನ ಅತ್ತಿಗೆಯ ಅಂತ್ಯಸಂಸ್ಕಾರದ ನಂತರದ ವಿಧಿಗಳಲ್ಲಿ ಪಾಲ್ಗೊಳ್ಳಲು ತನಗೆ ತಾತ್ಕಾಲಿಕ ಜಾಮೀನು ಮಂಜೂರುಗೊಳಿಸಬೇಕೆಂದು ವರವರ ರಾವ್ ಅರ್ಜಿ ಸಲ್ಲಿಸಿದ್ದರು.

 ಅರ್ಜಿಯ ವಿಚಾರಣೆ ಸೋಮವಾರ ನಡೆದಿದ್ದು ಈ ಸಂದರ್ಭ ವರವರ ರಾವ್ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಜಾಮೀನು ಅರ್ಜಿಗೆ ವಿರೋಧ ಸೂಚಿಸಿದ ಫಿರ್ಯಾದಿದಾರರು, ಅಪರಾಧ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದರೆ, ಆರೋಪಿಗೆ ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಆರೋಪಿಗೆ ತಾತ್ಕಾಲಿಕ ಜಾಮೀನು ನೀಡಿದರೆ ಅವರ ಜೊತೆಗೆ ತೆರಳುವ ಪೊಲೀಸ್ ಸಿಬ್ಬಂದಿಯ ಮೇಲೆ ನಕ್ಸಲರ ದಾಳಿಯಾಗುವ ಸಾಧ್ಯತೆಯಿದೆ ಎಂದು ಹೈದರಾಬಾದ್ ಪೊಲೀಸ್ ಅಧೀಕ್ಷಕರು ಪುಣೆಯ ಜಂಟಿ ಪೊಲೀಸ್ ಆಯುಕ್ತರಿಗೆ ಬರೆದ ಪತ್ರವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಕೆಡಿ ವದನೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News