ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಗೆ 50 ವಾರಗಳ ಜೈಲು ಶಿಕ್ಷೆ
Update: 2019-05-01 17:19 IST
ಲಂಡನ್, ಮೇ 1: ವಿಕಿಲೀಕ್ಸ್ ಸಹ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಗೆ ಜಾಮೀನು ಕಾಯಿದೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಬ್ರಿಟನ್ ನ ನ್ಯಾಯಾಲಯ 50 ವಾರಗಳ ಜೈಲು ಶಿಕ್ಷೆ ವಿಧಿಸಿದೆ.
ಜೂಲಿಯನ್ ಅಸ್ಸಾಂಜ್ ಜಾಮೀನು ಕಾಯ್ದೆಯನ್ನು ಉಲ್ಲಂಘಿಸಿರುವುದು ಕಳೆದ ತಿಂಗಳು ದೃಢಪಟ್ಟಿತ್ತು.
2012ರಿಂದ ಇಂಗ್ಲೆಂಡ್ನಲ್ಲಿ ತಲೆಮರೆಸಿಕೊಂಡಿದ್ದ ಜೂಲಿಯನ್ ಅಸ್ಸಾಂಜ್ ಅವರನ್ನು ಎ.12ರಂದು ಬಂಧಿಸಲಾಗಿತ್ತು.
ಜೂಲಿಯನ್ ಅಸ್ಸಾಂಜ್ ಅಮೆರಿಕ ಸರ್ಕಾರದ ಅತ್ಯಂತ ಮಹತ್ವದ ದಾಖಲೆಗಳನ್ನು ತನ್ನ ವೆಬ್ಸೈಟ್ನಲ್ಲಿ ಲೀಕ್ ಮಾಡಿ ಅಮೆರಿಕಕ್ಕೆ ತಲೆನೋವಾಗಿ ಪರಿಣಮಿಸಿದ್ದರು.