ರಮಝಾನ್ ತಿಂಗಳಲ್ಲಿ ಮತದಾನ ಬೆಳಿಗ್ಗೆ 5ರಿಂದ ಆರಂಭಿಸಲು ಮನವಿ: ಆಯೋಗ ನಿರ್ಧರಿಸಲಿ ಎಂದ ಸುಪ್ರೀಂ ಕೋರ್ಟ್

Update: 2019-05-02 07:20 GMT

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಕೊನೆಯ ಮೂರು ಹಂತಗಳು ರಮಝಾನ್ ಸಂದರ್ಭ ನಡೆಯಲಿರುವುದರಿಂದ ಮತದಾನವನ್ನು ಬೆಳಗ್ಗೆ 7 ಗಂಟೆಯಿಂದ ಆರಂಭಿಸುವ ಬದಲು 5 ಗಂಟೆಗೆ ಆರಂಭಿಸಲು ಅನುವು ಮಾಡಿ ಕೊಡಲು ಮತದಾನ ಸಮಯವನ್ನು ಪರಿಷ್ಕರಿಸುವಂತೆ ಕೋರಿ ಸಲ್ಲಿಸಲಾಗಿರುವ ಅಪೀಲಿನ ಕುರಿತಾದ ನಿರ್ಧಾರವನ್ನು ಕೈಗೊಳ್ಳಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿನ ಬಿಸಿಲಿನ ಝಳವೂ ಮತದಾನವನ್ನು ಬೇಗನೇ ಆರಂಭಿಸಬೇಕೆಂಬ ಬೇಡಿಕೆಯ ಹಿಂದಿನ ಇನ್ನೊಂದು ಕಾರಣವೆಂದು ಹೇಳಲಾಗಿದೆ.

“ಉರಿ ಬಿಸಿಲಿನ ಈ ಋತುವಿನಲ್ಲಿ ಮುಸ್ಲಿಂ ಮತದಾರರಿಗೆ ರಮಝಾನ್ ತಿಂಗಳಲ್ಲಿ  ಮತದಾನಕ್ಕಾಗಿ ಸರತಿ ನಲ್ಲುವುದು ಕಷ್ಟಕರವಾಗಬಹುದು,'' ಎಂದು ಅಪೀಲಿನಲ್ಲಿ ತಿಳಿಸಲಾಗಿದೆ.

ಚುನಾವಣಾ ದಿನಾಂಕಗಳು ಘೋಷಣೆಯಾದಾಗ ರಮಝಾನ್ ತಿಂಗಳಿನಲ್ಲೂ ಚುನಾವಣೆ ನಡೆಯುವ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ರಮಝಾನ್ ಮುಖ್ಯ ಹಬ್ಬದಂದು ಹಾಗೂ ಶುಕ್ರವಾರಗಳಂದು ಚುನಾವಣಾ ದಿನಾಂಕಗಳನ್ನು ನಿಗದಿ ಪಡಿಸಲಾಗಿಲ್ಲ ಎಂದು ಆಯೋಗ ಆಗ ಸ್ಪಷ್ಟೀಕರಣ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News