ಉಗ್ರರು ಕಳಿಸಿದ ವೀಡಿಯೊ ಪ್ರಸಾರಿಸಲು ಸೇನೆಯ ಒಪ್ಪಿಗೆ ಅಗತ್ಯ: ಶೀಘ್ರ ನಿಯಮ ಜಾರಿ

Update: 2019-05-04 15:05 GMT

ಹೊಸದಿಲ್ಲಿ, ಮೇ 4: ಭಯೋತ್ಪಾದಕರು ಅಥವಾ ಭಯೋತ್ಪಾದಕ ಸಂಘಟನೆಗಳು ಒದಗಿಸುವ ವೀಡಿಯೊಗಳನ್ನು ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವ ಮೊದಲು ಭಾರತೀಯ ಸೇನೆಯ ಅನುಮತಿ ಪಡೆಯಬೇಕು ಎಂಬ ನಿಯಮ ಶೀಘ್ರ ಜಾರಿಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸೇನಾಪಡೆ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ‘ನ್ಯೂಸ್ ಬ್ರಾಡ್‌ ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (ಎನ್‌ಬಿಎಸ್‌ಎ)’ , ಉಗ್ರರು ಕಳುಹಿಸುವ ವೀಡಿಯೊ ಪ್ರಸಾರ ಮಾಡುವಾಗ ಪ್ರಸಾರ ಮಾಧ್ಯಮಗಳು ರಾಷ್ಟ್ರೀಯ ಭದ್ರತೆಯ ವಿಷಯದ ಬಗ್ಗೆ ಗಮನ ಹರಿಸಿ ಎಚ್ಚರಿಕೆ ವಹಿಸಬೇಕು ಎಂದು ಟಿವಿ ಚಾನೆಲ್‌ಗಳಿಗೆ ಸೂಚಿಸಿದೆ. ಕಾಶ್ಮೀರದ 44 ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಔರಂಗಾಝೇಬ್‌ರನ್ನು 2018ರ ಜೂನ್ 15ರಂದು ಉಗ್ರರು ಅಪಹರಿಸಿದ್ದರು.

ಬಳಿಕ ಗುಂಡೇಟಿನಿಂದ ಜರ್ಝರಿತವಾಗಿದ್ದ ಅವರ ದೇಹ ಹೊಲದಲ್ಲಿ ಪತ್ತೆಯಾಗಿತ್ತು. ನಂತರ, ಯೋಧನನ್ನು ಅಪಹರಿಸಿದ್ದ ಉಗ್ರರು ನಿಗೂಢ ಸ್ಥಳದಲ್ಲಿ ಆತನನ್ನು ವಿಚಾರಣೆ ನಡೆಸುವ, ಕ್ರೂರವಾಗಿ ಹಿಂಸಿಸುವ ವೀಡಿಯೊವನ್ನು ಟಿವಿ ಚಾನೆಲ್‌ಗೆ ಕಳುಹಿಸಲಾಗಿತ್ತು. ಇದನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News