ಕೆನಡಾ ಪ್ರಜೆ ಅಕ್ಷಯ್ ಕುಮಾರ್ ರಾಷ್ಟ್ರಪ್ರಶಸ್ತಿಗೆ ಅರ್ಹರೇ: ಲೇಖಕ ಅಪೂರ್ವ ಅಸ್ರಾನಿ ಪ್ರಶ್ನೆ

Update: 2019-05-05 07:29 GMT

ಮುಂಬೈ, ಮೇ 5: ಕೆನಡಾದ ಪೌರತ್ವ ಪಡೆದಿದ್ದೇನೆ ಎಂದು ಹೇಳಿಕೊಂಡ ಅಕ್ಷಯ್ ಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ಘೋಷಿಸಿರುವುದನ್ನು ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಕಲನಕಾರ ಮತ್ತು ಲೇಖಕ ಅಪೂರ್ವ ಅಸ್ರಾನಿ ಸೇರಿದಂತೆ ಹಲವು ಮಂದಿ ಅಕ್ಷಯ್ ಕುಮಾರ್ ಗೆ ಸಿಕ್ಕ ರಾಷ್ಟ್ರಪ್ರಶಸ್ತಿ ಬಗ್ಗೆ ಪ್ರಶ್ನಿಸಿದ್ದಾರೆ.

"ಕೆನಡಾ ಪ್ರಜೆಗಳು ಭಾರತದ ರಾಷ್ಟ್ರಪ್ರಶಸ್ತಿಗೆ ಅರ್ಹರೇ?, 2016ನೇ ಸಾಲಿನಲ್ಲಿ ಅಕ್ಷಯ್ ಕುಮಾರ್ ಉತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಮನೋಜ್ ಬಾಜಪೇಯಿ ತಮ್ಮ ಅಲಿಘರ್ ಚಿತ್ರಕ್ಕಾಗಿ ಪ್ರಶಸ್ತಿ ಪಡೆಯಬಹುದು ಎಂದು ನಿರೀಕ್ಷಿಸಿದ್ದೆವು. ತೀರ್ಪುಗಾರರು ಕುಮಾರ್ ಪ್ರಕರಣದಲ್ಲಿ ತಪ್ಪು ಎಸಗಿದ್ದರೆ, ಹಿಂಪಡೆಯುತ್ತಾರೆಯೇ?" ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಚಲನಚಿತ್ರೋತ್ಸವದ ನಿರ್ದೇಶನಾಲಯದ ನಿಯಮಾವಳಿ ಪ್ರಕಾರ, ವಿದೇಶಿ ಮೂಲದ ಚಿತ್ರ ವೃತ್ತಿಪರರು ಮತ್ತು ತಂತ್ರಜ್ಞರನ್ನು ಕೂಡಾ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ತೀರ್ಪುಗಾರರ ತಂಡದಲ್ಲಿದ್ದ ಚಿತ್ರ ನಿರ್ಮಾಪಕ ರಾಹುಲ್ ಧೋಲಾಕಿಯಾ ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಕ್ಷಯ್ ಕುಮಾರ್ ರುಸ್ತುಂ ಚಿತ್ರಕ್ಕಾಗಿ 2016ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News