ಅಭಿವೃದ್ಧಿಗಾಗಿ ಮತ ನೀಡಬೇಡಿ, ದೇಶದ ಭದ್ರತೆಗಾಗಿ ಮತ ನೀಡಿ ಎಂದ ಅಮಿತ್ ಶಾ

Update: 2019-05-08 16:58 GMT

ಜಮ್ಶೇಡ್ ಪುರ, ಮೇ 8: ಅಭಿವೃದ್ಧಿಗಾಗಿ ಮತ ನೀಡಬೇಡಿ, ರಾಷ್ಟ್ರೀಯ ಭದ್ರತೆಗಾಗಿ ಮತ ನೀಡಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ಜಮ್ಶೇಡ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿದ್ಯುತ್ ಬಾರನ್ ಮಹ್ತೋರಿಗೆ ಅಭಿವೃದ್ಧಿಗಾಗಿ ಮತ ಚಲಾಯಿಸಬೇಡಿ. ದೇಶದ ಗಡಿಯನ್ನು ಪ್ರಧಾನಿ ಮೋದಿ ಸುರಕ್ಷಿತವಾಗಿರಿಸಿದ್ದಕ್ಕಾಗಿ ಅವರಿಗೆ ಮತ ನೀಡಿ. ದೇಶದ ಗಡಿ ಭಾಗದ ಸುರಕ್ಷತೆಗೆ ಪ್ರಧಾನಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ ಶತ್ರು ಸೇನೆ ದೇಶದ ಮೇಲೆ ದಾಳಿ ನಡೆಸುತ್ತಿತ್ತು, ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News