ನೇಣಿಗೆ ಶರಣಾಗುತ್ತೇನೆ ಎಂದ ಗಂಭೀರ್ !: ಕಾರಣವೇನು ಗೊತ್ತಾ ?

Update: 2019-05-10 16:33 GMT

ಹೊಸದಿಲ್ಲಿ, ಮೇ 10: ಪೂರ್ವ ದಿಲ್ಲಿಯ ಆಪ್ ಅಭ್ಯರ್ಥಿ ಆತಿಶ್ ಮರ್ಲೀನಾ ವಿರುದ್ಧ ವಿತರಿಸಲಾದ ಮಾನಹಾನಿಕರ ಹಾಗೂ ಅಶ್ಲೀಲ ಅಂಶವುಳ್ಳ ಕರಪತ್ರದೊಂದಿಗೆ ತನಗೆ ಸಂಬಂಧ ಇದೆ ಎಂಬುದನ್ನು ಆಪ್ ಸಾಬೀತುಪಡಿಸಿದರೆ, ತಾನು ಸಾರ್ವಜನಿಕವಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹೇಳಿದ್ದಾರೆ.

 ಈ ಆರೋಪವನ್ನು ಸಾಬೀತುಪಡಿಸಲು ಆಪ್ ವಿಫಲವಾದಲ್ಲಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯಕ್ಕೆ ರಾಜೀನಾಮೆ ನೀಡಬೇಕು ಎಂದು ಗಂಭೀರ್ ಆಗ್ರಹಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಹಾಗೂ ಆಪ್‌ಗೆ 3ನೇ ಸವಾಲು. ಕರಪತ್ರದೊಂದಿಗೆ ನನಗೆ ಏನಾದರೂ ಸಂಬಂಧ ಇದ್ದರೆ, ನಾನು ಬಹಿರಂಗವಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇಲ್ಲದೇ ಇದ್ದರೆ, ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯಕ್ಕೆ ರಾಜೀನಾಮೆ ನೀಡಬೇಕು. ಸ್ವೀಕಾರಾರ್ಹವೇ ?” ಎಂದು ಪ್ರಶ್ನಿಸಿ ಗಂಭೀರ್ ಟ್ವೀಟ್ ಮಾಡಿದ್ದಾರೆ. ಆತಿಶಿ ಅವರನ್ನು ಗುರಿಯಾಗಿರಿಸಿ ವಿತರಿಸುತ್ತಿರುವ ಅಶ್ಲೀಲ ಕರಪತ್ರಕ್ಕೆ ಸಂಬಂಧಿಸಿ ಗಂಭೀರ್ ಅವರನ್ನು ತಖೆಗೆ ಒಳಪಡಿಸಬೇಕು ಎಂದು ಕೋರಿ ಬಿಜೆಪಿ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಕೆ. ಮಹೇಶ್ ಅವರನ್ನು ಸಂಪರ್ಕಿಸಿದೆ.

ಈ ವಿಷಯದ ಕುರಿತು ತನಿಖೆ ನಡೆಸುವಂತೆ ಕೋರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪೂರ್ವ ದಿಲ್ಲಿಯ ಚುನಾವಣಾ ಅಧಿಕಾರಿಗೆ ಬಿಜೆಪಿಯ ಕೃಷ್ಣ ನಗರದ ಕೌನ್ಸಿಲರ್ ಸಂದೀಪ್ ಕಪೂರ್ ದೂರು ಸಲ್ಲಿಸಿದ್ದಾರೆ ಎಂದು ದಿಲ್ಲಿಯ ಬಿಜೆಪಿ ವಕ್ತಾರ ಹರೀಶ್ ಖುರಾನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News