ಮನೆಮಂದಿಗೆ ಥಳಿಸಿದ ಬಿಜೆಪಿ ಸಂಸದನ ಪುತ್ರನ ಬಂಧನ
Update: 2019-05-12 13:12 IST
ಲಕ್ನೊ, ಮೇ 12: ಗಯಾ ಬಿಜೆಪಿ ಸಂಸದ ಹರಿ ಮಂನ್‌ಜ್ಹಿ ಅವರ ಪುತ್ರ ರಾಹುಲ್ ಕುಮಾರ್‌ರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕುಮಾರ್ ತನ್ನ ಪತ್ನಿ, ತಾಯಿ, ಸಹೋದರಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಬಂಧಿಸಲಾಗಿದೆ.
‘‘ಸಂಸದ ಹರಿ ಶುಕ್ರವಾರ ಪೊಲೀಸರಿಗೆ ಕರೆ ಮಾಡಿ ತನ್ನ ಪುತ್ರ ರಾಹುಲ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ವೈದ್ಯಕೀಯ ವರದಿಯಲ್ಲಿ ಆರೋಪಿಯು ಘಟನೆಯ ವೇಳೆ ನಶೆಯಲ್ಲಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಸುತಿದ್ದಾರೆ ಎಂದು ವರದಿಯಾಗಿದೆ.