ಟಿಎಂಸಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಕ್ಕೆ ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಭಾರತಿ
ಕೋಲ್ಕತಾ, ಮೇ 12: ಪಶ್ಚಿಮಬಂಗಾಳದ ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್‌ಗೆ ಮತಗಟ್ಟೆ ಬಳಿ ಕೆಲವರು ನಿಂದಿಸಿದ್ದಾರೆ. ಇದರಿಂದ ಬೇಸರಗೊಂಡ ಅವರು ಕಣ್ಣೀರು ಹಾಕಿದ ಘಟನೆ ನಡೆದಿದೆ.
ತೃಣಮೂಲ ಕಾಂಗ್ರೆಸ್‌ನ ಕೆಲವು ಮಹಿಳಾ ಕಾರ್ಯಕರ್ತೆಯರು ತನ್ನ ಕ್ಷೇತ್ರದ ಮತಗಟ್ಟೆ ಬಳಿ ತೆರಳಿದ ವೇಳೆ ತನ್ನನ್ನು ತಳ್ಳಿದರು ಎಂದು ಭಾರತಿ ಆರೋಪಿಸಿದರು.
ರವಿವಾರ ಪಶ್ಚಿಮಬಂಗಾಳ ಸಹಿತ ಇತರ 7 ರಾಜ್ಯಗಳಲ್ಲಿ ಆರನೇ ಹಂತದ ಚುನಾವಣೆ ನಡೆಯುತ್ತಿದೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕೇಶಪುರದ ಚಾಂದ್‌ಖಾಲಿ ಪ್ರದೇಶದಲ್ಲಿರುವ ಬೂತ್‌ಗೆ ತನ್ನ ಚುನಾವಣಾ ಏಜೆಂಟ್ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ ಎಂದು ಈ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಆತ್ಮೀಯರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಹೇಳಿದ್ದಾರೆ.
‘‘ನಾನು ಬಿಜೆಪಿ ಅಭ್ಯರ್ಥಿ. ನನ್ನನ್ನು ಟಿಎಂಸಿ ಬೆಂಬಲಿಗರು ಕೆಳಗೆ ಬೀಳಿಸಿದ್ದಾರೆ. ನನ್ನ ಮೇಲೆ ಹಲ್ಲೆಗೆ ಮುಂದಾಗಿರುವ, ತನ್ನ ಚುನಾವಣಾ ಏಜೆಂಟ್‌ನ್ನು ಬೂತ್ ಒಳಗೆ ಹೋಗಲು ಬಿಡದವರನ್ನು ಬಂಧಿಸಲೇಬೇಕಾಗಿದೆ ಎಂದು ಭಾರತಿ ಘೋಷ್ ಹೇಳಿದ್ದಾರೆ.