×
Ad

ಸಹಾಯ ಮಾಡುವ ನೆಪದಲ್ಲಿ ತಾನೇ ಮತ ಹಾಕಿದ ಬಿಜೆಪಿ ಏಜೆಂಟ್ ಬಂಧನ

Update: 2019-05-13 16:50 IST

ಗುರ್ಗಾಂವ್, ಮೇ 13: ಫರೀದಾಬಾದ್ ನ ಮತದಾನ ಕೇಂದ್ರವೊಂದರಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿಯ ಮತದಾನ ಏಜಂಟನೊಬ್ಬ ಯತ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗಿರಿರಾಜ್ ಸಿಂಗ್ ಎಂಬ ಹೆಸರಿನ ಏಜಂಟ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿ ಕೆಲ ಮತದಾರರಿಗೆ ಸಹಾಯ ಮಾಡುವ ನೆಪದಲ್ಲಿ ಮತದಾನದ ಗುಂಡಿಯನ್ನು ಒತ್ತಿದ್ದ. “ಆತನನ್ನು ತಡೆಯಲು ಯತ್ನಿಸಿದರೂ ಆತ  ನನ್ನ ಮಾತು ಕೇಳಿಲ್ಲ. ಈತನ್ಮಧ್ಯೆ ಆತನ ಕೃತ್ಯದ ವೀಡಿಯೋವನ್ನು ಯಾರೋ ತೆಗೆದಿದ್ದು ಅದು ವೈರಲ್ ಆಗಿದೆ. ಘಟನೆ ನಡೆದ ಕೆಲ ಹೊತ್ತಿನ ನಂತರ ಆತ ತಪ್ಪಿಸಿಕೊಂಡಿದ್ದ” ಎಂದು ಮತದಾನ ಅಧಿಕಾರಿ ಅಮಿತ್ ಕತ್ರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಕನಿಷ್ಠ ಮೂರು ಮತದಾರರಿಗೆ ಆತ ಸಹಾಯ ಮಾಡುವ ನೆಪದಲ್ಲಿ ಇವಿಎಂ ಗುಂಡಿ ಒತ್ತಿದ್ದ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯುಕ್ತ ಅಶೋಕ್ ಲಾವಸ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News