ಆಸ್ಟ್ರೇಲಿಯ ‘ಎ’ -ಭಾರತದ ಹಾಕಿ ಪಂದ್ಯ ಡ್ರಾ

Update: 2019-05-13 19:23 GMT

 ಪರ್ತ್, ಮೇ 13: ಡ್ರಾಗ್ ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಭಾರತದ ಪುರುಷರ ಹಾಕಿ ತಂಡ ಆಸ್ಟ್ರೇಲಿಯ ‘ಎ’ ವಿರುದ್ಧ ಸಮಾಧಾನಕರ ಡ್ರಾ ಸಾಧಿಸಿದೆ. ಭಾರತ ಮೊದಲ ಕ್ವಾರ್ಟರ್‌ನಲ್ಲಿ ಸತತ ಪೆನಾಲ್ಟಿ ಕಾರ್ನರ್‌ನ್ನು ಎದುರಾಳಿಗೆ ಬಿಟ್ಟುಕೊಡದೇ ರಕ್ಷಣಾತ್ಮಕವಾಗಿ ಆಡಿತು. ಆಸ್ಟ್ರೇಲಿಯ ‘ಎ’ ತಂಡ ಆರಂಭದಲ್ಲಿ ಒತ್ತಡ ಹಾಕಿದ ಕಾರಣ ಭಾರತ ಒತ್ತಡಕ್ಕೆ ಸಿಲುಕಿತು. 21ನೇ ನಿಮಿಷದಲ್ಲಿ ಕಿರಣ್ ಅರುಣ ಉತ್ತಮ ಫೀಲ್ಡ್ ಗೋಲು ಗಳಿಸಿ ಆಸ್ಟ್ರೇಲಿಯಕ್ಕೆ ‘ಎ’ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಭಾರತ ಸ್ಟ್ರೈಕಿಂಗ್ ಸರ್ಕಲ್‌ನಲ್ಲಿ ಸಿಕ್ಕಿದ ಅವಕಾಶ ಬಳಸಿಕೊಳ್ಳಲು ಅಸಮರ್ಥವಾಯಿತು. ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಕಳೆದುಕೊಂಡು ಮರಳಿ ಹೋರಾಡುವ ಅವಕಾಶ ತಪ್ಪಿಸಿಕೊಂಡಿತು. 56ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ತನ್ನ ಎರಡನೇ ಯತ್ನದಲ್ಲಿ ಶಕ್ತಿಶಾಲಿ ಡ್ರಾಗ್‌ಫ್ಲಿಕ್‌ನಲ್ಲಿ ಗೋಲು ಗಳಿಸಿ 1-1 ರಿಂದ ಸಮಬಲ ಸಾಧಿಸಿದರು. ‘‘ಪಂದ್ಯದ ಮೊದಲ 10 ನಿಮಿಷ ನಾವು ಕಳಪೆ ಆರಂಭ ಪಡೆದಿದ್ದೆವು. ಇದು ಶುಕ್ರವಾರದ ಪಂದ್ಯಕ್ಕೆ ತದ್ವಿರುದ್ಧದ ಪ್ರದರ್ಶನವಾಗಿತ್ತು. 2ನೇ, 3ನೇ ಹಾಗೂ 4ನೇ ಕ್ವಾರ್ಟರ್‌ನಲ್ಲಿ ನಿಧಾನವಾಗಿ ಪಂದ್ಯಕ್ಕೆ ವಾಪಸಾದೆವು. ಪಂದ್ಯ ಗೆಲ್ಲಲು ಸಾಕಷ್ಟು ಅವಕಾಶವನ್ನು ಸೃಷ್ಟಿಸಿಕೊಂಡಿದ್ದೇವೆ ನಾಳೆ ನಡೆಯಲಿರುವ ಪ್ರಾಕ್ಟೀಸ್ ಸೆಶನ್‌ನಲ್ಲಿ ಮಿಡ್ ಫೀಲ್ಡ್ ವಿಭಾಗದತ್ತ ಗಮನ ನೀಡುತ್ತೇವೆ’’ ಎಂದು ಭಾರತದ ಮುಖ್ಯ ಕೋಚ್ ಗ್ರಹಾಮ್ ರೆಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News