ಲೋಕಸಭಾ ಚುನಾವಣಾ ಫಲಿತಾಂಶ ಮೇ 23 ಅಥವಾ 24 ಕ್ಕೆ!

Update: 2019-05-15 16:14 GMT

ಹೊಸದಿಲ್ಲಿ,ಮೇ 15: ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶಗಳು ನಾಲ್ಕು ಗಂಟೆಗಳಷ್ಟು ವಿಳಂಬವಾಗಿ ಪ್ರಕಟವಾಗುವ ನಿರೀಕ್ಷೆಯಿದೆ ಅಥವಾ ಮೇ 24ರಂದು ಬೆಳಿಗ್ಗೆ ಘೋಷಿಸಲ್ಪಡಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಯೋರ್ವರು ಮಂಗಳವಾರ ಇಲ್ಲಿ ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯವು 2019ರ ಸಾರ್ವತ್ರಿಕ ಚುನಾವಣೆಗಳಿಗಾಗಿ ಇವಿಎಂ ಜೊತೆ ತಾಳೆ ಹಾಕಬೇಕಾದ ವಿವಿಪ್ಯಾಟ್‌ಗಳ ಸಂಖ್ಯೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಿಂದ ಐದಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ.

ವಿವಿಪ್ಯಾಟ್ ವ್ಯವಸ್ಥೆಯನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಬಳಸಲಾಗಿದ್ದು,ಅದರಿಂದ ಇವಿಎಂ ಪ್ರತಿಯೊಂದೂ ಮತವನ್ನು ಸ್ಲಿಪ್‌ನಲ್ಲಿ ದಾಖಲಿಸಲು ಸಾಧ್ಯವಾಗುತ್ತದೆ.

ಸರಾಸರಿಯಾಗಿ ಒಂದು ವಿವಿಪ್ಯಾಟ್ ಮೂಲಕ ಮತಗಳನ್ನು ಎಣಿಕೆ ಹಾಕಲು ಒಂದು ಗಂಟೆ ಬೇಕಾಗುತ್ತದೆ. ಈ ಮೊದಲು ನಾವು ಒಂದು ವಿವಿಪ್ಯಾಟ್ ನ್ನು ತಾಳೆ ಹಾಕುತ್ತಿದ್ದೆವು. ಈಗ ಇನ್ನೂ ನಾಲ್ಕು ವಿವಿಪ್ಯಾಟ್‌ಗಳನ್ನು ತಾಳೆ ಹಾಕಬೇಕಿದೆ,ಅಂದರೆ ಮತ ಎಣಿಕೆಗೆ ಹೆಚ್ಚುವರಿಯಾಗಿ ನಾಲ್ಕು ಗಂಟೆಗಳು ಬೇಕಾಗುತ್ತವೆ. ಹೀಗಾಗಿ ಪರಿಣಾಮಗಳು ಮೇ 23ರ ಸಂಜೆಯ ವೇಳೆಗೆ ಅಥವಾ ಮೇ 24ರಂದು ಬೆಳಿಗ್ಗ್ಗೆ ಪ್ರಕಟಗೊಳ್ಳಬಹುದು ಎಂದು ವಿವಿಪ್ಯಾಟ್‌ಗಳ ಉಸ್ತುವಾರಿ ಹೊಂದಿರುವ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ತಿಳಿಸಿದರು.

ಇವಿಎಮ್‌ಗಳು ಮತ್ತು ವಿವಿಪ್ಯಾಟ್‌ಗಳು ಪರಿಪೂರ್ಣವಾಗಿವೆ ಮತ್ತು ಅವುಗಳಲ್ಲಿ ಹಸ್ತಕ್ಷೇಪ ಸಾಧ್ಯವೇ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News