ಅಲಬಾಮ: ಕಠಿಣ ಗರ್ಭಪಾತ ನಿಷೇಧ ಮಸೂದೆ ಅಂಗೀಕಾರ

Update: 2019-05-15 18:37 GMT

ವಾಶಿಂಗ್ಟನ್, ಮೇ 15: ಅಮೆರಿಕದ ಅಲಬಾಮ ರಾಜ್ಯದ ಸೆನೆಟ್ ಬಹುತೇಕ ಎಲ್ಲ ಗರ್ಭಪಾತಗಳನ್ನು ನಿಷೇಧಿಸುವ ಮಸೂದೆಯೊಂದನ್ನು ಮಂಗಳವಾರ ಅಂಗೀಕರಿಸಿದೆ. ತಾಯಿಯ ಆರೋಗ್ಯವನ್ನು ರಕ್ಷಿಸಬೇಕಾದ ಸಂದರ್ಭದಲ್ಲಿ ಮಾತ್ರ ವಿನಾಯಿತಿ ನೀಡಲಾಗಿದೆ.

ಈ ಮಸೂದೆಯ ಪ್ರಕಾರ, ಗರ್ಭಪಾತ ಮಾಡುವ ವೈದ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ.

ರಿಪಬ್ಲಿಕನ್ನರು ಬಹುಮತ ಹೊಂದಿರುವ ಅಲಬಾಮ ಸೆನೆಟ್ ಅಂಗೀಕರಿಸಿರುವ ಮಸೂದೆಯು, ಅತ್ಯಾಚಾರದಿಂದ ಮತ್ತು ರಕ್ತಸಂಬಂಧದ ಒಳಗೆ ಗರ್ಭಿಣಿಯಾದರೂ ಗರ್ಭಪಾತವನ್ನು ನಿರಾಕರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News