ಶಾಂಘೈ: ವಾಣಿಜ್ಯ ಕಟ್ಟಡ ಕುಸಿತ; 5 ಸಾವು

Update: 2019-05-16 17:10 GMT

ಶಾಂಘೈ, ಮೇ 16: ಚೀನಾದ ಶಾಂಘೈ ನಗರದ ವಾಣಿಜ್ಯ ಕಟ್ಟಡವೊಂದರ ಮೇಲ್ಛಾವಣಿ ಕುಸಿದು ಗುರುವಾರ ಐವರು ಮೃತಪಟ್ಟಿದ್ದಾರೆ. ಕಟ್ಟಡವನ್ನು ದುರಸ್ತಿಗೊಳಿಸುತ್ತಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆಯೇ ಅದು ಕುಸಿದಿದೆ.

ಬೆಳಗ್ಗೆ 11.30ರ ಸುಮಾರಿಗೆ ದುರಂತ ಸಂಭವಿಸಿದೆ. ಕಟ್ಟಡ ಕುಸಿದಾಗ ಅದರ ಒಳಗೆ ಸುಮಾರು 20 ಜನರು ಸಿಕ್ಕಿಕೊಂಡಿದ್ದರು ಎಂದು ರಕ್ಷಣಾ ಅಧಿಕಾರಿಗಳು ಹೇಳಿದರು.15 ಮಂದಿಯನ್ನು ಜೀವಂತವಾಗಿ ಹೊರದೆಗೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News