ಕುಟುಂಬಕ್ಕೆ ಕೊಲೆ ಬೆದರಿಕೆ: ಎಸ್‌ಪಿ ನಾಯಕ ಆಝಂ ಖಾನ್ ಪತ್ನಿ ಆರೋಪ
ರಾಮ್‌ಪುರ,ಮೇ.17: ರಾಮ್‌ಪುರದ ಆಡಳಿತ ಅಧಿಕಾರಿಗಳಿಂದ ತನ್ನ ಕುಟುಂಬಕ್ಕೆ ಬೆದರಿಕೆಯಿದ್ದು ಈಕೂಡಲೇ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಪತ್ನಿ ಆಗ್ರಹಿಸಿದ್ದಾರೆ.
ರಾಮ್‌ಪುರದ ಕೆಲವು ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಏನೋ ಯೋಜನೆ ರೂಪಿಸುತ್ತಿದ್ದಾರೆ. ಅವರು ನನ್ನ ಪತಿ ಮತ್ತು ಮಗನನ್ನು ಹತ್ಯೆ ಮಾಡಲು ಬಯಸಿದ್ದಾರೆ ಎಂದು ಡಾ. ತಝೀನ್ ಫಾತಿಮಾ ಆರೋಪಿಸಿದ್ದಾರೆ.
ಈ ಅಧಿಕಾರಿಗಳು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಪ್ರದೇಶದಲ್ಲಿ ಹಿಂಸಾಚಾರ ಹರಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದೂ ಡಾ. ಫಾತಿಮಾ ಆರೋಪಿಸಿದ್ದಾರೆ. ನಾವು ರಹಸ್ಯ ಸಭೆಗಳನ್ನು ನಡೆಸುತ್ತೇವೆ, ಆಝಂ ಖಾನ್ ಅವರನ್ನು ಹತ್ಯೆ ಮಾಡಲು ಪಿತೂರಿ ನಡೆಸುತ್ತಿದ್ದೇವೆ ಎಂದು ಖಾನ್ ಆರೋಪಿಸಿದ್ದಾರೆ.
ಆದರೆ ಇದೆಲ್ಲವೂ ಸುಳ್ಳು. ನಾವು ನಮ್ಮ ಮನೆಯ ಸುತ್ತ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ್ದೇವೆ. ಹಾಗಾಗಿ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದೇವೆ ಎಂದು ಎಡಿಎಂ ಜೆ.ಪಿ ಗುಪ್ತಾ ತಿಳಿಸಿದ್ದಾರೆ. ಈಗಾಗಲೇ ಮೂರು ಅಧಿಕಾರಿಗಳು ಎಸ್‌ಪಿಗೆ ಪತ್ರ ಬರೆದು ತಮ್ಮ ಕಚೇರಿ ಮತ್ತು ನಿವಾಸದ ಮೇಲೆ ಕಣ್ಗಾವಲಿಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.