ಈ ಬಾರಿ ದೇಶಾದ್ಯಂತ ಬರಗಾಲವೇ?: ರಾಜ್ಯಗಳಿಗೆ ಎಚ್ಚರಿಕೆ ರವಾನಿಸಿದ ಕೇಂದ್ರ

Update: 2019-05-17 17:49 GMT

ಹೊಸದಿಲ್ಲಿ,ಮೇ.17: ದೇಶದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ವೇಗವಾಗಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿಗೆ ಕೇಂದ್ರ ಸರಕಾರ ಬರಗಾಲ ಎಚ್ಚರಿಕೆಯನ್ನು ರವಾನಿಸಿದೆ.

ಅಣೆಕಟ್ಟುಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸರಾಸರಿಯಿದ್ದ ನೀರಿನ ಮಟ್ಟಕ್ಕಿಂತ ಶೇ.20 ಇಳಿಕೆಯಾದಾಗ ಈ ರೀತಿ ಬರಗಾಲ ಎಚ್ಚರಿಕೆ ಪತ್ರಗಳನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ರವಾನಿಸುತ್ತದೆ. ನೀರು ರಾಜ್ಯಗಳ ಅಧೀನದಲ್ಲಿ ಬರುವಂಥದ್ದಾಗಿದೆ ಮತ್ತು ಈ ಅಣೆಕಟ್ಟುಗಳಲ್ಲಿ ನೀರಿನ ಮರುಹೂರಣವಾಗುವವರೆಗೆ ಕೇವಲ ಕುಡಿಯುವ ಉದ್ದೇಶಕ್ಕೆ ನೀರನ್ನು ಬಳಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸಲಹೆ ನೀಡುತ್ತದೆ ಎಂದು ಕೇಂದ್ರ ಜಲ ಆಯೋಗದ

(ಸಿಡಬ್ಲೂಸಿ) ಸದಸ್ಯ ಎಸ್.ಕೆ ಹಲ್ದರ್ ತಿಳಿಸಿದ್ದಾರೆ. ಸಿಡಬ್ಲೂಸಿ ದೇಶದ 91 ಪ್ರಮುಖ ಜಲಾಶಯಗಳ ಮೇಲೆ ನಿಗಾಯಿಟ್ಟಿರುತ್ತದೆ. ಗುರುವಾರ ಬಿಡುಗಡೆ ಮಾಡಲಾದ ಅಂಕಿಅಂಶಗಳ ಪ್ರಕಾರ, ಈ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ 35.99 ಬಿಲಿಯನ್ ಕ್ಯೂಬಿಕ್ ಮೀ.ಆಗಿದೆ. ಇದು ಈ ಜಲಾಶಯಗಳ ಒಟ್ಟಾರೆ ಸಂಗ್ರಹಣಾ ಸಾಮರ್ಥ್ಯದ ಶೇ.22 ಆಗಿದೆ ಎಂದು ಹಲ್ದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News