ಅ.ಪ್ರದೇಶದ ಎರಡು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿ ಆದೇಶ
Update: 2019-05-18 20:24 IST
ಇಟಾನಗರ,ಮೇ 18: ಚುನಾವಣಾ ಅಕ್ರಮಗಳ ದೂರುಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ(ಇಸಿ)ವು ಅರುಣಾಚಲ ಪ್ರದೇಶದ ಎರಡು ಮತಗಟ್ಟೆಗಳಲ್ಲಿ ಮೇ 21ರಂದು ಮರುಮತದಾನಕ್ಕೆ ಆದೇಶಿಸಿದೆ.
ಕುರುಂಗ್ ಕುಮೆ ಜಿಲ್ಲೆಯ ಕೊಲೊರಿಯಾಂಗ್ ಕ್ಷೇತ್ರ ಮತ್ತು ಕ್ರಾ ದಾಡಿ ಜಿಲ್ಲೆಯ ಟಾಲ್ ಕ್ಷೇತ್ರಗಳ ತಲಾ ಒಂದು ಮತಗಟ್ಟೆಗಳಲ್ಲಿ ಮರು ಮತದಾನ ಬೆಳಿಗ್ಗೆ 6ರಿಂದ ಅಪರಾಹ್ನ 2 ಗಂಟೆಯವರೆಗೆ ನಡೆಯಲಿದೆ ಎಂದು ಉಪ ಮುಖ್ಯ ಚುನಾವಣಾಧಿಕಾರಿ ಲಿಕೆನ್ ಕೊಯು ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.