‘ಹಿಂದೂ’ ಬದಲು ಭಾರತೀಯರೆನ್ನಿ: ಕಮಲ್ ಹಾಸನ್

Update: 2019-05-18 15:06 GMT

ಚೆನ್ನೈ, ಮೇ 18: ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂಬ ಹೇಳಿಕೆ ನೀಡಿದ್ದ ಮೂಲಕ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ‘ಹಿಂದೂ’ ಎಂಬ ಪದ ಯಾವುದೇ ಪ್ರಾಚೀನ ಗ್ರಂಥಗಳಲ್ಲಿ ಇಲ್ಲ. ಇದು ವಿದೇಶಿ ಆಕ್ರಮಣಕಾರರು ನೀಡಿದ ಶಬ್ಧ ಎಂದು ಹೇಳಿದ್ದಾರೆ.

  ಆಲ್ವಾರ್ ಆಗಲಿ, ನಾಯನ್ಮಾರ್ ಆಗಲಿ, ವೈಷ್ಣವ ಅಥವಾ ಶೈವ ಸಂತರಾಗಲಿ ‘ಹಿಂದೂ’ ಎಂಬ ಪದವನ್ನು ಉಲ್ಲೇಖಿಸಿಲ್ಲ. ಆದುದರಿಂದ ನಮ್ಮನ್ನು ನಾವು ಭಾರತೀಯರು ಎಂದು ಗುರುತಿಸಿಕೊಳ್ಳಬೇಕೆ ಹೊರತು ಹಿಂದೂಗಳೆಂದು ಅಲ್ಲ ಎಂದು ಅವರು ತಮಿಳಿನಲ್ಲಿ ಮಾಡಿದ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮೊಗಲರು ಅಥವಾ ಭಾರತವನ್ನು ಅದಕ್ಕಿಂತ ಹಿಂದೆ ಆಳಿದ ಆಡಳಿತಗಾರರು ‘ಹಿಂದೂ’ ಎಂಬ ಪದ ಬಳಸಿದರು. ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಈ ಪದವನ್ನು ಬ್ರಿಟಿಷರು ಮುಂದುವರಿಸಿಕೊಂಡು ಹೋದರು ಎಂದು ಅವರು ತಿಳಿಸಿದರು.

‘‘ಸೌಹಾರ್ದದಿಂದ ಬಾಳುವುದರಲ್ಲಿ ಸಾವಿರಾರು ಲಾಭ’’ ಎಂದ ನಾಣ್ಣುಡಿ ಉಲ್ಲೇಖಿಸಿದ ಕಮಲ್ ಹಾಸನ್, ಧರ್ಮದ ಎದುರು ದೇಶವನ್ನು ಕುಗ್ಗಿಸುವುದು ವಾಣಿಜ್ಯ, ರಾಜಕೀಯ ಹಾಗೂ ಆಧ್ಯಾತ್ಮಿಕವಾಗಿ ತಪ್ಪು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News