ರಾಹುಲ್ ಗಾಂಧಿಯನ್ನು ಭೇಟಿಯಾದ ಚಂದ್ರಬಾಬು ನಾಯ್ದು

Update: 2019-05-18 16:20 GMT

ಹೊಸದಿಲ್ಲಿ, ಮೇ 18: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೊಸದಿಲ್ಲಿಯಲ್ಲಿರುವ ಅವರ ನಿವಾಸದಲ್ಲಿ ಟಿಡಿಪಿ ವರಿಷ್ಠ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿಯಾದರು ಹಾಗೂ ಚುನಾವಣೋತ್ತರ ಸಂದರ್ಭದಲ್ಲಿ ಮೈತ್ರಿ ಸಾಧ್ಯತೆ ಬಗ್ಗೆ ಚರ್ಚೆ ನಡೆಸಿದರು.

 ಬಿಜೆಪಿ ವಿರೋಧಿ ಮೈತ್ರಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಚಂದ್ರಬಾಬು ನಾಯ್ಡು ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವುದಕ್ಕಿಂತ ಮುನ್ನ ಸಿಪಿಐ ನಾಯಕರಾದ ಸುಧಾರಕ ರೆಡ್ಡಿ ಹಾಗೂ ಡಿ. ರಾಜಾ ಅವರನ್ನು ಭೇಟಿಯಾದರು.

ನಾಯ್ಡು ಅವರು ಶುಕ್ರವಾರ ಸಿಪಿಎನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹಾಗೂ ಆಪ್‌ನ ವರಿಷ್ಠ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು.

 ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಬಿಜೆಪಿ ವಿರುದ್ಧದ ಮೈತ್ರಿಯ ಭಾಗವಾಗಲು ಬಯಸುವ ತೆಲಂಗಾಣ ರಾಷ್ಟ್ರ ಮೈತ್ರಿ ಸಹಿತ ಯಾವುದೇ ಪಕ್ಷವನ್ನು ಸ್ವಾಗತಿಸಲಾಗುವುದು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News