ನಡಾಲ್-ಫೆಡರರ್ ಸೆಮಿ ಫೈನಲ್‌ನಲ್ಲಿ ಮುಖಾಮುಖಿ?

Update: 2019-05-25 07:07 GMT

ಪ್ಯಾರಿಸ್, ಮೇ 24: ರವಿವಾರ ಆರಂಭವಾಗಲಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ಗೆ ಗುರುವಾರ ಡ್ರಾ ಪ್ರಕ್ರಿಯೆ ನಡೆದಿದ್ದು ಇಬ್ಬರು ಟೆನಿಸ್ ದಿಗ್ಗಜರಾದ ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.

ನಡಾಲ್ ಪ್ಯಾರಿಸ್‌ನಲ್ಲಿ 12ನೇ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 2009ರ ಚಾಂಪಿಯನ್ ಫೆಡರರ್ 2015ರ ಬಳಿಕ ಮೊದಲ ಬಾರಿ ಫ್ರೆಂಚ್ ಓಪನ್ ಕಿರೀಟ ಧರಿಸಲು ಎದುರು ನೋಡುತ್ತಿದ್ದಾರೆ.

ನಡಾಲ್ ಕ್ವಾಲಿಫೈಯರ್ ಆಟಗಾರನನ್ನು ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಎದುರಿಸಲಿದ್ದಾರೆ. ಫೆಡರರ್ ಇಟಲಿಯ ಲೊರೆಂರೊ ಸೊನೆಗೊರನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ.

ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಪೊಲ್ಯಾಂಡ್‌ನ ಹುಬರ್ಟ್ ಹುರ್ಕಾಝ್‌ರನ್ನು ಮುಖಾಮುಖಿಯಾಗುವುದರೊಂದಿಗೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ ತನ್ನ ಹೋರಾಟ ಆರಂಭಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News