ಬೆಂಕಿಯ ಕೆನ್ನಾಲಗೆಯಿಂದ 10 ಮಕ್ಕಳನ್ನು ರಕ್ಷಿಸಿದ ಕೇತನ್ ಈಗ ಸೂರತ್ ನ ಹೀರೋ

Update: 2019-05-25 12:38 GMT
ಕೃಪೆ: ಎಎನ್ಐ

 ಸೂರತ್ : ಸೂರತ್ ನಗರದ  ತಕ್ಷಶಿಲಾ ಆರ್ಕೇಡ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕೋಚಿಂಗ್ ಸೆಂಟರ್ ನಲ್ಲಿ ಶುಕ್ರವಾರ ನಡೆದ ಬೆಂಕಿ ಅವಘಡದಲ್ಲಿ 20 ಮಕ್ಕಳು ಬಲಿಯಾದರೆ, ಸುಮಾರು 10 ಮಂದಿಯನ್ನು ಬೆಂಕಿಯ ಕೆನ್ನಾಲಗೆಯಿಂದ ರಕ್ಷಿಸಿದ ಯುವಕ ಕೇತನ್ ಜೊರವಾಡಿಯಾ ಈಗ ಸೂರತ್ ನ ಹೀರೋ ಆಗಿದ್ದಾರೆ.

ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದಾಗ ಹಲವು ಜನರು ಫೋಟೋ ಹಾಗೂ ವೀಡಿಯೊ ತೆಗೆಯುತ್ತಿರುವುದನ್ನು ಆ ಕಡೆಯಿಂದ ಸಾಗುತ್ತಿದ್ದ ಕೇತನ್ ನೋಡಿದ್ದರು. ಅಷ್ಟರೊಳಗಾಗಿ  ಒಬ್ಬಳು ಬಾಲಕಿ ತನ್ನನ್ನು ರಕ್ಷಿಸಿಕೊಳ್ಳುವ  ಭರದಲ್ಲಿ ಕೆಳಕ್ಕೆ ಹಾರಿದ್ದನ್ನು ನೋಡಿ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿ ತನ್ನ ಜೀವದ ಹಂಗನ್ನು ತೊರೆದು ಏಣಿಯ ಸಹಾಯದಿಂದ ಕಟ್ಟಡದ ಹಿಂಬದಿಯಿಂದ 8-10 ಮಕ್ಕಳನ್ನು ಕೆಳಗಿಳಿಸಿ ನಂತರ ಇನ್ನಿಬ್ಬರನ್ನು  ಕೇತನ್ ರಕ್ಷಿಸಿದ್ದರು.

ತಮ್ಮ ಪ್ರಾಣದ ಹಂಗನ್ನು ತೊರೆದು ಮಕ್ಕಳನ್ನು ರಕ್ಷಿಸಲು ಅವರು ಮಾಡಿದ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲೂ ಪ್ರಶಂಸೆಗೊಳಗಾಗಿದೆ. ಆದರೆ ಇನ್ನೂ ಹಲವು ಮಕ್ಕಳನ್ನು ಬೆಂಕಿಯಿಂದ ತಪ್ಪಿಸಲು ಸಾಧ್ಯವಾಗಿಲ್ಲವೆಂಬ ವಿಷಾಧ ಕೇತನ್ ಅವರಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News