ಟ್ರಂಪ್ ನಿಲುವಿಗೆ ಡೆಮಾಕ್ರಾಟರ ಕಳವಳ

Update: 2019-05-25 18:21 GMT

ವಾಶಿಂಗ್ಟನ್,ಮೇ 25: ಮಧ್ಯಪ್ರಾಚ್ಯದಲ್ಲಿ ಇರಾನ್‌ನೊಂದಿಗೆ ಬಿಕ್ಕಟ್ಟು ಉಲ್ಬಣಿಸಿರುವ ಬಗ್ಗೆ ಅಮೆರಿಕದ ಪ್ರತಿಪಕ್ಷವಾದ ಡೆಮಾಕ್ರಾಟಿಕ್ ಪಕ್ಷದ ಸಂಸದರು ಕಳವಳ ಹಾಗೂ ಆತಂಕ ವ್ಯಕ್ತಪಡಿಸಿದಾರೆ. ಶುಕ್ರವಾರ ಟ್ರಂಪ್ ಆಡಳಿತದ ಅಧಿಕಾರಿಗಳ ಜೊತೆ ನಡೆಸಿದ ರಹಸ್ಯ ಸಭೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಕಾರ್ಯನಿರತ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಾಹಾನ್ ಸೇನಾ ವರಿಷ್ಠರ ಜಂಟಿ ಮುಖ್ಯಸ್ಥ ಜೋಸೆಫ್ ಡ್ಯೂನ್‌ಫೋರ್ಡ್ ಹಾಗೂ ಅಮೆರಿಕದ ಬೇಹುಗಾರಿಕಾ ಇಲಾಖೆಯ ಅಧಿಕಾರಿ ಈ ಮಾಹಿತಿಗಳನ್ನು ನೀಡಿದರು.

     ಇರಾನ್‌ನ ಪ್ರಚೋದನಕಾರಿ ಕೃತ್ಯಗಳಿಗೆ ಅಮೆರಿಕವು ಪ್ರತಿಕ್ರಿಯಿಸುತ್ತಿರುವುದಾಗಿ ಟ್ರಂಪ್ ಆಡಳಿತದ ಅಧಿಕಾರಿಗಳು ಮಾತುಕತೆ ವೇಳೆ ಸಮರ್ಥಿಸಿಕೊಳ್ಳಲು ಯತ್ನಿಸಿದರಾದರೂ, ಕಳೆದ ವರ್ಷ ಇರಾನ್ ಜೊತೆಗಿನ ಅಣುಶಕ್ತಿ ಒಪ್ಪಂದವನ್ನು ಕಡಿದುಕೊಂಡಿರುವುದು ಹಾಗೂ ಆ ದೇಶದ ಮೇಲೆ ಟ್ರಂಪ್ ಆಡಳಿತ ವಿಧಿಸಿದ ಆರ್ಥಿಕ ದಿಗ್ಬಂಧನಗಳ ಬಗ್ಗೆ ಸಭೆಯಲ್ಲಿ ಯಾವುದೇ ಪ್ರಸ್ತಾವಗಳನ್ನು ಮಾಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News