×
Ad

ದೇಶದ ಪ್ರಧಾನಿಯಾಗಿ 2ನೆ ಬಾರಿ ನರೇಂದ್ರ ಮೋದಿ ಪ್ರಮಾಣವಚನ

Update: 2019-05-30 19:07 IST

ಹೊಸದಿಲ್ಲಿ, ಮೇ 30: ದೇಶದ 15ನೆ ಪ್ರಧಾನ ಮಂತ್ರಿಯಾಗಿ 2ನೆ ಬಾರಿಗೆ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ  ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಕಿರ್ಗಿಝ್ ರಿಪಬ್ಲಿಕ್‌ನ ಅಧ್ಯಕ್ಷ ಸೂರೋನ್‌ ಬೇ ಜೀನ್‌ ಬೆಕೋವ್, ಮ್ಯಾನ್ಮಾರ್‌ನ ಅಧ್ಯಕ್ಷ ಯು ವಿನ್ ಮಿಂಟ್, ಮಾರಿಷಶ್ ಪ್ರಧಾನ ಮಂತ್ರಿ ಪ್ರವಿಂದ್ ಕುಮಾರ್ ಜಗ್ನೌತ್, ನೇಪಾಳದ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ, ಭೂತಾನ್ ಪ್ರಧಾನ ಮಂತ್ರಿ ಡಾ. ಲೊಟೆ ತ್ಸೇರಿಂಗ್, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಪ್ ನಾಯಕ ಅರವಿಂದ ಕೇಜ್ರಿವಾಲ್,  ಸಿಜೆಐ ರಂಜನ್ ಗೊಗೊಯಿ, ಶಶಿ ತರೂರ್, ನಿತೀಶ್ ಕುಮಾರ್, ಕೈಲಾಶ್ ಸತ್ಯಾರ್ಥಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಜಿನಿಕಾಂತ್ ಮೊದಲಾದ ಗಣ್ಯರು  ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News