ಗರ್ಭಪಾತ ನಿಷೇಧ ಮಸೂದೆ ಅಂಗೀಕರಿಸಿದ ಲೂಸಿಯಾನ ರಾಜ್ಯ

Update: 2019-05-30 18:05 GMT

ವಾಶಿಂಗ್ಟನ್, ಮೇ 30: ಭ್ರೂಣವೊಂದರ ಹೃದಯ ಬಡಿತ ಪತ್ತೆಯಾದ ಬಳಿಕ ಗರ್ಭಪಾತ ಮಾಡುವುದನ್ನು ನಿಷೇಧಿಸುವ ಮಸೂದೆಯನ್ನು ಲೂಸಿಯಾನ ರಾಜ್ಯದ ಸಂಸದರು ಅಂಗೀಕರಿಸಿರುವ ಹಿನ್ನೆಲೆಯಲ್ಲಿ, ಆ ಮಸೂದೆಗೆ ಸಹಿ ಹಾಕುವುದಾಗಿ ರಾಜ್ಯದ ಗವರ್ನರ್, ಡೆಮಾಕ್ರಟಿಕ್ ಪಕ್ಷದ ಜಾನ್ ಬೆಲ್ ಎಡ್ವರ್ಡ್ಸ್ ಹೇಳಿದ್ದಾರೆ.

ಅಮೆರಿಕದ ದಕ್ಷಿಣ ಮತ್ತು ಮಧ್ಯಪಶ್ಚಿಮ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗರ್ಭಪಾತ ವಿರೋಧಿ ಆಂದೋಲನವೊಂದು ನಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಭ್ರೂಣವೊಂದರ ಹೃದಯ ಬಡಿತ ಪತ್ತೆಯಾದ ಬಳಿಕ ಗರ್ಭಪಾತವನ್ನು ನಿಷೇಧಿಸುವ ಮಸೂದೆಯನ್ನು ಲೂಸಿಯಾನದ ರಿಪಬ್ಲಿಕನ್ ಪ್ರಾಬಲ್ಯದ ಶಾಸನ ಸಭೆಯು 79-23 ಮತಗಳಿಂದ ಬುಧವಾರ ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ. ಭ್ರೂಣದ ಹೃದಯಬಡಿತವನ್ನು ಮಹಿಳೆಯೊಬ್ಬರು ಗರ್ಭಧರಿಸಿದ ಆರು ವಾರಗಳಲ್ಲೇ, ಅಂದರೆ ತಾನು ಗರ್ಭಿಣಿ ಎನ್ನುವುದು ಮಹಿಳೆಯ ಗಮನಕ್ಕೆ ಬರುವ ಮೊದಲೇ ಪತ್ತೆಹಚ್ಚಬಹುದಾಗಿದೆ.

ಗರ್ಭಪಾತ ಮಾಡುವ ಮಹಿಳೆಯ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಹೊರತಾಗಿಯೂ, ರಿಪಬ್ಲಿಕನ್ ಪ್ರಾಬಲ್ಯದ ಹಲವು ರಾಜ್ಯಗಳ ಶಾಸನಸಭೆಗಳು ಗರ್ಭಪಾತ ನಿಷೇಧ ಮಸೂದೆಗಳನ್ನು ಅಂಗೀಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News