ಎಚ್-4 ವೀಸಾದಾರರ ಉದ್ಯೋಗದ ಹಕ್ಕು ರಕ್ಷಿಸುವ ಮಸೂದೆ ಮಂಡನೆ

Update: 2019-05-30 18:08 GMT

ವಾಶಿಂಗ್ಟನ್, ಮೇ 30: ಎಚ್-4 ವೀಸಾ ಹೊಂದಿರುವವರ ಕೆಲಸ ಮಾಡುವ ಹಕ್ಕನ್ನು ರಕ್ಷಿಸುವ ಉದ್ದೇಶದ ಮಸೂದೆಯೊಂದನ್ನು ಕ್ಯಾಲಿಫೋರ್ನಿಯದ ಇಬ್ಬರು ಪ್ರಭಾವಿ ಸಂಸದರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದಾರೆ.

ಅತ್ಯುನ್ನತ ಕೌಶಲ ಹೊಂದಿರುವವರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಎಚ್-1ಬಿ ವೀಸಾಗಳನ್ನು ನೀಡಲಾಗುತ್ತದೆ. ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ. ಎಚ್-1ಬಿ ವೀಸಾದಾರರ ಪೈಕಿ ಹೆಚ್ಚಿನವರು ಭಾರತೀಯ ಪುರುಷರಾಗಿದ್ದು, ಸಹಜವಾಗಿಯೇ ಎಚ್-4 ವೀಸಾದಾರರ ಪೈಕಿ ಹೆಚ್ಚಿನವರು ಭಾರತೀಯ ಮಹಿಳೆಯರಾಗಿದ್ದಾರೆ.

ಎಚ್-4 ವೀಸಾದಾರರ ಕೆಲಸ ಮಾಡುವ ಹಕ್ಕನ್ನು ನಿರಾಕರಿಸುವ ಕಾನೂನನ್ನು ಈ ತಿಂಗಳು ಘೋಷಿಸಲಾಗುವುದು ಎಂಬುದಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಘೋಷಿಸಿದ ದಿನಗಳ ಬಳಿಕ ಈ ಮಸೂದೆಯನ್ನು ಮಂಡಿಸಲಾಗಿದೆ.

ಸಂಸದರಾದ ಆನಾ ಜಿ ಎಶೂ ಮತ್ತು ರೆ ಲಫ್‌ಗ್ರೆನ್ ಈ ಮಸೂದೆಯನ್ನು ಮಂಡಿಸಿದ್ದಾರೆ.

‘‘ಸ್ಥಳೀಯ ಆರ್ಥಿಕತೆಗೆ ದೇಣಿಗೆ ನೀಡುವ ಹಾಗೂ ತಮ್ಮ ಕುಟುಂಬಗಳನ್ನು ಆಧರಿಸುವ ಅವಕಾಶವನ್ನು ಪಡೆಯಲು ಎಚ್-4 ವೀಸಾದಾರರು ಅರ್ಹರಾಗಿದ್ದಾರೆ’’ ಎಂದು ಎಶೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News