×
Ad

‘ಜಲ ಶಕ್ತಿ' ಸಚಿವಾಲಯ ರಚಿಸಿದ ಮೋದಿ ಸರಕಾರ: ಇದರ ವಿಶೇಷತೆಯೇನು ಗೊತ್ತಾ ?

Update: 2019-05-31 20:48 IST

ಹೊಸದಿಲ್ಲಿ, ಮೇ 31: ಈ ಹಿಂದಿನ ಜಲಸಂಪನ್ಮೂಲ ಸಚಿವಾಲಯ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವನ್ನು ವಿಲೀನಗೊಳಿಸಿ ನೂತನ ‘ಜಲ ಶಕ್ತಿ’ ಸಚಿವಾಲಯ ರೂಪಿಸಲಾಗಿದೆ. ಸಂಪುಟ ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿರುವ ಗಜೇಂದ್ರ ಸಿಂಗ್ ಶೇಖಾವತ್ ಶುಕ್ರವಾರ ‘ಜಲ ಶಕ್ತಿ’ ಸಚಿವಾಲಯದ ಅಧಿಕಾರ ವಹಿಸಿಕೊಂಡಿದ್ದಾರೆ.

ನೀರಿನ ಸಮಸ್ಯೆ ಪರಿಹರಿಸಲು ಸಮಗ್ರ ಸಚಿವಾಲಯವೊಂದನ್ನು ರೂಪಿಸಲಾಗುವುದು ಎಂದು ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ‘ಜಲಶಕ್ತಿ’ಯಿಂದಾಗಿ ನೀರಿಗೆ ಸಂಬಂಧಿಸಿದ ಎಲ್ಲ ಕೆಲಸಗಳು ಒಂದೇ ಸಚಿವಾಲಯದ ಅಡಿಯಲ್ಲಿ ನಡೆಯಲಿದೆ ಎಂದು ಉಸ್ತುವಾರಿ ವಹಿಸಿಕೊಂಡ ಬಳಿಕ ಶೇಖಾವತ್ ತಿಳಿಸಿದ್ದಾರೆ.

ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಗಂಗಾ ಹಾಗೂ ಅದರ, ಉಪ ನದಿಗಳನ್ನು ಸ್ವಚ್ಛಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆ ಬೈಝಂಟೈನ್ ನಮಾಮಿ ಗಂಗಾ ಯೋಜನೆಯಿಂದ ಅಂತಾರಾಷ್ಟ್ರೀಯ, ಅಂತರ್ ರಾಜ್ಯ ಜಲ ವಿವಾದಗಳ ವರೆಗಿನ ವಿಷಯಗಳನ್ನು ಈ ಸಚಿವಾಲಯ ಒಳಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News