×
Ad

ಈ ರಾಜ್ಯದ ಶೇ. 33 ಸಂಸದರು ಮಹಿಳೆಯರು!

Update: 2019-05-31 22:09 IST

ಭುವನೇಶ್ವರ, ಮೇ.31: 17ನೇ ಲೋಕಸಭೆಗೆ ರಾಜ್ಯದಿಂದ ಶೇ.33 ಮಹಿಳಾ ಸಂಸದರು ಚುನಾಯಿತರಾಗುವ ಮೂಲಕ ಒಡಿಶಾ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಸತತ ಐದನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿರುವ ಬಿಜು ಜನತಾದಳದ ಮುಖಂಡ ನವೀನ್ ಪಟ್ನಾಯಕ್ ಎರಡು ತಿಂಗಳ ಹಿಂದೆ, ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವುದಾಗಿ ಘೋಷಣೆ ಮಾಡಿದ್ದರು.

ಲೋಕಸಭಾ ಚುನಾವಣೆಯಲ್ಲಿ ಒಡಿಶಾದಿಂದ ಚುನಾಯಿತರಾದ 21 ಸಂಸದರ ಪೈಕಿ ಏಳು ಮಹಿಳಾ ಸಂಸದರಿದ್ದು ಇವರಲ್ಲಿ ಐವರು ಬಿಜು ಜನತಾದಳದ ಸಂಸದರಾದರೆ ಇಬ್ಬರು ಬಿಜೆಪಿ ಸಂಸದರಾಗಿದ್ದಾರೆ.

ತಾನು ನೀಡಿದ ಭರವಸೆಯಂತೆ ಪಟ್ನಾಯಕ್ ಏಳು ಮಹಿಳೆಯರಿಗೆ ಪಕ್ಷದ ಟಿಕೆಟ್ ನೀಡಿದ್ದರು. ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಪಟ್ನಾಯಕ್, ಐದನೇ ಬಾರಿ ಚುನಾವಣೆಯಲ್ಲಿ ಅದ್ಬುತ ಗೆಲುವು ಸಾಧಿಸಲು ನೆರವಾದ ಮಹಿಳಾ ಮತದಾರರ ಒಳಿತಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಒತ್ತಾಯಿಸುವುದಾಗಿ ಮತ್ತು ಸಂಸತ್‌ನಲ್ಲೂ ಶೇ.33 ಮಹಿಳೆಯರಿರುವಂತೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News