ಸತತ 10ನೇ ಬಾರಿ ಕ್ವಾ.ಫೈನಲ್‌ಗೆ ತಲುಪಿದ ನೊವಾಕ್ ಜೊಕೊವಿಕ್

Update: 2019-06-04 03:41 GMT

ಪ್ಯಾರಿಸ್, ಜೂ.3: ಅಗ್ರ ಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಕ್ ಸೋಮವಾರ ಸತತ ನಾಲ್ಕನೇ ಬಾರಿ ನೇರ ಸೆಟ್‌ಗಳಿಂದ ಜಯ ಸಾಧಿಸುವ ಮೂಲಕ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

  ಜೊಕೊವಿಕ್ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಜಾನ್-ಲೆನಾರ್ಡ್ ಸ್ಟ್ರಫ್ ವಿರುದ್ಧ 6-3, 6-2, 6-2 ಸೆಟ್‌ಗಳಿಂದ ಜಯ ಸಾಧಿಸಿದರು. ಈ ಗೆಲುವಿನ ಮೂಲಕ ಫ್ರೆಂಚ್ ಓಪನ್‌ನಲ್ಲಿ ಸತತ 10ನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. 11 ಬಾರಿ ಚಾಂಪಿಯನ್ ಆಗಿರುವ ನಡಾಲ್ ಕೂಡ ಈ ಸಾಧನೆ ಮಾಡಿಲ್ಲ.

ನೇರ ಸೆಟ್‌ಗಳಿಂದ ಸೋತಿರುವ ಜರ್ಮನಿಯ ಸ್ಟ್ರಫ್‌ಗೆ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪುವ ಕನಸು ಈಡೇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News