ದ್ವಿಭಾಷಾ ಸೂತ್ರ ಇಲ್ಲೂ ಬರಲಿ

Update: 2019-06-04 18:21 GMT

ಮಾನ್ಯರೇ,

ಈಗ ತ್ರಿಭಾಷಾ ಸೂತ್ರ ಪಾಲಿಸುವ/ಅನ್ವಯಗಳ ಕುರಿತು ಮಾತುಕತೆಯು ನಡೆಯುತ್ತಿದೆ. ಈ ಸೂತ್ರವು ಹೊಸದೇನೂ ಅಲ್ಲ. ಈಗಾಗಲೇ 60 ವರ್ಷಗಳಿಂದ ಇದೆ. ಹಿಂದಿ ಪ್ರಾಂತದ ಯಾವುದೇ ರಾಜ್ಯದಲ್ಲಿಯೂ ಹಿಂದಿಯನ್ನು ಬಿಟ್ಟು ದೇಶದ ಬೇರೆ ಭಾಷೆಗಳನ್ನು ಶಾಲೆಗಳಲ್ಲಿ ಕಲಿಸುತ್ತಿಲ್ಲ. ನಮ್ಮ ರಾಜ್ಯದ ಮಕ್ಕಳಿಗೆ ಮಾತ್ರ ಏಕೆ ಅಧಿಕ ಹೊರೆ? ತಮಿಳುನಾಡಿನಲ್ಲಿ ಇರುವಂತೆ ದ್ವಿಭಾಷಾ ಸೂತ್ರವು ಇಲ್ಲೂ ಸಾಕಲ್ಲವೇ. ಹೊಸ ಹೊಸ ನೆಪಗಳಲ್ಲಿ ಹಿಂದಿ ಹೇರುವುದಕ್ಕೆ ಯತ್ನ ನಡೆಯುತ್ತಲೇ ಇದೆ. ನಮ್ಮ ಕನ್ನಡ ನುಡಿಯು ಈಗಾಗಲೇ ಆಧುನಿಕವಾಗಿದೆ. ಕನ್ನಡ ಭಾಷೆಯ ಕವಿ/ಲೇಖಕರಿಗೆ ಈ ವರೆಗೆ ಅಧಿಕವಾಗಿ ಜ್ಞಾನಪೀಠ ಸಮ್ಮಾನವೂ ದೊರೆತಿರುವುದು ನಮ್ಮ ಭಾಷೆಯ ಬಗೆಗಿನ ಹೆಮ್ಮೆಯಾಗಿದೆ. ಹೀಗಿರುವಾಗ ಬೇರೆ ಭಾಷೆಯ ಹೇರಿಕೆ ಅನಗತ್ಯ ಎಂದು ಒತ್ತಿ ಹೇಳಬೇಕಾಗಿದೆ. ಒಟ್ಟಿನಲ್ಲಿ ನಮ್ಮ ನಾಡನ್ನು ಹಿಂದಿಗರ ವ್ಯಾಪ್ತಿಯಿಂದ ದೂರವಿರಿಸಬೇಕಾಗಿದೆ.

-ಡಿ. ವಿ. ಎಂ. ಪ್ರಕಾಶ್, ಮೈಸೂರು

Similar News