×
Ad

ಪ್ರಧಾನಿ ಮೋದಿಗೆ ಮಾಲ್ದೀವ್ಸ್ ನ ಅತ್ಯುನ್ನತ ಗೌರವ ‘ರೂಲ್ ಆಫ್ ನಿಷಾನ್ ಇಝುದ್ದೀನ್’ ಪ್ರದಾನ

Update: 2019-06-08 20:53 IST

ಮಾಲೆ, ಜೂ. 8: ವಿದೇಶಿ ನಾಗರಿಕರಿಗೆ ನೀಡುವ ಮಾಲ್ದೀವ್ಸ್‌ನ ಅತ್ಯುನ್ನತ ಗೌರವ ‘ರೂಲ್ ಆಫ್ ನಿಷಾನ್ ಇಝುದ್ದೀನ್’ ಅನ್ನು ಮಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೋಲಿ ಪ್ರದಾನ ಮಾಡಿದರು.

 ಪ್ರಧಾನಿ ಮೋದಿ ರಿಪಬ್ಲಿಕ್ ಸ್ಕ್ವೇರ್‌ಗೆ ಆಗಮಿಸಿದಾಗ ಅವರಿಗೆ ಗೌರವ ರಕ್ಷೆ ಯೊಂದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು . ಈ ಗೌರವವನ್ನು ಅತ್ಯುನ್ನತ ಸೇವೆ ಸಲ್ಲಿಸುವ ವಿದೇಶಿ ಗಣ್ಯರಿಗೆ ಮಾಲ್ದೀವ್ಸ್ ಸರಕಾರ ನೀಡುತ್ತದೆ.

ಭಾರತದ ಪ್ರಧಾನಿಯರಿಗೆ ಮಾಲ್ದೀವ್ಸ್ ಅಧ್ಯಕ್ಷ ಪ್ರತಿಷ್ಠಿತ ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು ಎಂದು ಮಾಲ್ದೀವ್ಸ್‌ನ ವಿದೇಶ ಸಚಿವಾಲಯ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News