ಭೋಪಾಲ: ನೀರಿಲ್ಲದೆ 15 ಮಂಗಗಳ ಸಾವು

Update: 2019-06-08 17:52 GMT

ಭೋಪಾಲ, ಜೂ. 8: ಮಧ್ಯಪ್ರದೇಶದ ಅರಣ್ಯದಲ್ಲಿ ಒಂದು ಗುಂಪಿನ ಮಂಗಗಳು ನದಿ ನೀರು ಬಳಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಇನ್ನೊಂದು ಗುಂಪಿಗೆ ಸೇರಿದ 15 ಮಂಗಗಳು ಬಿಸಿಲ ಬೇಗೆ ತಾಳಲಾರದೆ ಸಾವನ್ನಪ್ಪಿವೆ.

ದೇವಾಸ್ ಜಿಲ್ಲೆಯ ಪುಂಜಾಪುರ ಅರಣ್ಯ ವಲಯದ ಜೋಶಿ ಬಾಬಾ ಪ್ರದೇಶದಲ್ಲಿ ಗುರುವಾರ 9 ಮಂಗಳು ಕಳೇಬರಗಳು ಪತ್ತೆಯಾಗಿವೆ. ಮರುದಿನ ಇನ್ನೂ ಆರು ಮಂಗಳ ಕಳೇಬರಗಳು ಪತ್ತೆಯಾಗಿವೆ.

ಕಾಳಿ ಸಿಂಧ್ ನದಿಯ ಉಪನದಿಯಾದ ಪೌನಿಯ ಸಮೀಪ ಸುಮಾರು 60ರ ಸಂಖ್ಯೆಯಲ್ಲಿದ್ದ ಮಂಗಗಳ ಗುಂಪೊಂದು ಕಾವಲು ಕಾಯುತ್ತಿರುವುದನ್ನು ಗಮನಿಸಿರುವುದಾಗಿ ವಿಭಾಗೀಯ ಅಣ್ಯಾಧಿಕಾರಿ ಪಿ.ಎನ್. ಮಿಶ್ರಾ ತಿಳಿಸಿದ್ದಾರೆ.

ನದಿಯ ಹಲವು ಸ್ಥಳಗಳಲ್ಲಿ ನೀರು ಬತ್ತಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಂಗಗಳ ಗುಂಪೊಂದು ಕಾವಲು ಕಾಯುತ್ತಿತ್ತು. ನೀರು ಕುಡಿಯಲು ಬಂದ ಇತರ ಮಂಗಗಳನ್ನು ದೂರ ಓಡಿಸುತ್ತಿದ್ದುವು ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News