ಸೂಪರ್ 30 ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರ

Update: 2019-06-08 18:34 GMT

ದೀರ್ಘಸಮಯದ ನಿರೀಕ್ಷೆಯ ಬಳಿಕ, ಹೃತಿಕ್ ರೋಶನ್ ಅಭಿನಯದ ‘ಸೂಪರ್ 30’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಪ್ರೇಕ್ಷಕರ ಮನಗೆದ್ದಿದೆ. ಅಷ್ಟು ಮಾತ್ರವಲ್ಲ, ಹೃತಿಕ್ ಅವರ ಗ್ಲಾಮರ್‌ರಹಿತವಾದ ಲುಕ್ ಅನ್ನು ಕೇವಲ ಸಿನೆಮಾ ಪ್ರಿಯರು ಮಾತ್ರವಲ್ಲದೆ ಬಾಲಿವುಡ್‌ನ ಸೆಲೆಬ್ರಿಟಿಗಳು ಕೂಡಾ ಮೆಚ್ಚಿಕೊಂಡಿದ್ದಾರೆ.

ತನ್ನ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಆಗಿರುವ ‘ಸೂಪರ್ 30’ ಚಿತ್ರದ ಟ್ರೇಲರ್‌ನ್ನು ಹೃತಿಕ್ ರೋಶನ್ ಖುದ್ದಾಗಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘‘ಎಲ್ಲಾ ಸೂಪರ್ ಹೀರೋಗಳು ಕ್ಯಾಪ್(ಖ್ಯಾತಿ, ಪ್ರಶಸ್ತಿ) ಗಳನ್ನು ಧರಿಸಬೇಕೆಂದೆನಿಲ್ಲ.ಅವರ ಚಿಂತನೆಗಳು ರಾಷ್ಟ್ರವನ್ನು ನಿರ್ಮಿಸುತ್ತವೆ. ಭಾರತದ ಹೃದಯಭಾಗದಿಂದ ಅಂತಹ ಒಂದು ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ’’ ಎಂದು ಹೃತಿಕ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್‌ನ ಜನಪ್ರಿಯ ಯುವನಟ ಟೈಗರ್‌ಶ್ರಾಫ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ 30 ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ. ಅಂದಹಾಗೆ ಹೃತಿಕ್ ಹಾಗೂ ಟೈಗರ್‌ಶ್ರಾಫ್ ಅವರು ಶೀಘ್ರದಲ್ಲೇ ಸೆಟ್ಟೇರಲಿರುವ ಫೈಟರ್ಸ್‌ ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರೆ

ವಿಕಾಸ್‌ಬೆಹ್ಲ್ ನಿರ್ದೇಶನದ ಸೂಪರ್ 30 ಚಿತ್ರದಲ್ಲಿ ಮೃಣಾಲ್ ಠಾಕೂರ್, ನಂದೀಶ್ ಸಿಂಗ್, ಅಮಿತ್‌ಸಾಧ್, ಪಂಕಜ್ ತ್ರಿಪಾಠಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 12ರಂದು ಚಿತ್ರ ಬಿಡುಗಡೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News