ಮೀಟೂ ಪ್ರಕರಣ: ನಾನಾ ಪಾಟೇಕರ್ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ: ಪೊಲೀಸ್
Update: 2019-06-13 20:36 IST
ಮುಂಬೈ, ಜೂ. 13: ನಟಿ ತನುಶ್ರೀ ದತ್ತಾ ದಾಖಲಿಸಿದ ಕಿರುಕುಳ ಪ್ರಕರಣದಲ್ಲಿ ನಟ ನಾನಾ ಪಾಟೇಕರ್ ಅವರನ್ನು ವಿಚಾರಣೆ ನಡೆಸಲು ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಅಂಧೇರಿಯಲ್ಲಿರುವ ಮೆಟ್ರೋಪಾಲಿಟಿನ್ ದಂಡಾಧಿಕಾರಿ ಮುಂದೆ ಉಪನಗರ ಓಶಿವಾರ ಪೊಲೀಸರು ಬುಧವಾರ 'ಬಿ ಸಮ್ಮರಿ' ವರದಿ ಸಲ್ಲಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಪರಮ್‌ಜಿತ್ ಸಿಂಗ್ ದಾಹಿಯಾ ತಿಳಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಸಲು ಹಾಗೂ ವಿಚಾರಣೆಗೆ ಕೋರಲು ಆರೋಪಿ ವ್ಯಕ್ತಿ ವಿರುದ್ಧ ಯಾವುದೇ ಸಾಕ್ಷ್ಯಗಳು ಪತ್ತೆಯಾಗದಿರುವಾಗ ಪೊಲೀಸರು 'ಬಿ ಸಮ್ಮರಿ' ವರದಿ ಸಲ್ಲಿಸುತ್ತಾರೆ.
2008ರಲ್ಲಿ 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭ ನಾನಾ ಪಾಟೇಕರ್ ಕಿರುಕುಳ ನೀಡಿದ್ದಾರೆ ಹಾಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತನುಶ್ರೀ ದತ್ತಾ 2018 ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಿಸಿದ್ದರು.