ಪತ್ರಕರ್ತನ ಮೇಲೆ ಹಲ್ಲೆ: ಉತ್ತರಪ್ರದೇಶದ ಡಿಜಿಪಿಗೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2019-06-15 18:04 GMT

ಲಕ್ನೋ, ಜೂ. 15: ಶಾಮ್ಲಿಯಲ್ಲಿ ಪತ್ರಕರ್ತನ ಮೇಲೆ ಸರಕಾರಿ ರೈಲ್ವೆ ಪೊಲೀಸ್‌ನ ಸಿಬ್ಬಂದಿ ಕ್ರೂರವಾಗಿ ಹಲ್ಲೆ ನಡೆಸಿದ ಕುರಿತು ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಶುಕ್ರವಾರ ನೋಟಿಸು ಜಾರಿ ಮಾಡಿದೆ.

ಪೊಲೀಸರ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳು, ಅವರ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ನ ಸ್ಥಿತಿಗತಿ ಸಹಿತ ವಿವರವಾದ ವರದಿಯನ್ನು ನಾಲ್ಕು ವಾರಗಳ ಒಳಗೆ ಸಲ್ಲಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಆಯೋಗ ಸೂಚಿಸಿದೆ. ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಜೂನ್ 11ರಂದು ರಾತ್ರಿ ಟಿ.ವಿ. ಪತ್ರಕರ್ತನ ಮೇಲೆ ಸರಕಾರಿ ರೈಲ್ವೆ ಪೊಲೀಸ್‌ನ ಠಾಣಾಧಿಕಾರಿ ಹಾಗೂ ಕಾನ್ಸ್‌ಟೆಬಲ್ ನಡೆಸಿದ ದಾಳಿಯ ವರದಿಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ತಿಳಿಸಿದೆ.

ಹಲ್ಲೆಯ ವೀಡಿಯೊ ವೈರಲ್ ಆದ ಮರು ದಿನ ಸರಕಾರಿ ರೈಲ್ವೆ ಪೊಲೀಸ್‌ನ ಠಾಣಾಧಿಕಾರಿ ಹಾಗೂ ಕಾನ್ಸ್‌ಟೆಬಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಹಾಗೂ ಅವರನ್ನು ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News