ಹೆಚ್ಚಿನ ಕ್ಷೇತ್ರಗಳು ಕುಸಿದಿದ್ದರೂ ಆರ್ಥಿಕ ಸಮೀಕ್ಷೆ ವರದಿ ಸಮರ್ಥಿಸಿಕೊಂಡ ಮಹಾರಾಷ್ಟ್ರ ಸಚಿವ

Update: 2019-06-17 16:40 GMT

ಮುಂಬೈ,ಜೂ.17: 2025ರ ವೇಳೆಗೆ ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕತೆಯಾಗಲು ಮಹಾರಾಷ್ಟ್ರವು ಹೆಣಗುತ್ತಿದೆಯಾದರೂ, ಈ ಬೆಳವಣಿಗೆಗೆ ಒತ್ತು ನೀಡಬೇಕಿರುವ ಹೆಚ್ಚಿನ ಕ್ಷೇತ್ರಗಳು 2018-19ನೇ ಸಾಲಿನಲ್ಲಿ ಕುಸಿತವನ್ನು ದಾಖಲಿಸಿವೆ. ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯ ಅಂಕಿಸಂಖ್ಯೆಗಳು ಇದನ್ನು ಬೆಟ್ಟುಮಾಡಿವೆ.

ಇದೇ ವೇಳೆ ರಾಜ್ಯದ ಹಲವಾರು ಭಾಗಗಳಲ್ಲಿ ತೀವ್ರ ಬರದಿಂದಾಗಿ 2018-19ನೇ ಹಣಕಾಸು ವರ್ಷಕ್ಕೆ ರಾಜ್ಯದಲ್ಲಿ ಬೆಳೆ ಉತ್ಪಾದನೆಯು ಶೇ.8ರ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ. ನಿರ್ಮಾಣ ಕ್ಷೇತ್ರದಲ್ಲಿ ಶೇ.2ರಷ್ಟು ಪ್ರಗತಿಯನ್ನು ಹೊರತುಪಡಿಸಿದರೆ ಗಣಿಗಾರಿಕೆ, ತಯಾರಿಕೆಯಂತಹ ಇತರ ಕ್ಷೇತ್ರಗಳು ಇಳಿಮುಖ ಪ್ರವೃತ್ತಿಯನ್ನು ಪ್ರದರ್ಶಿಸಿವೆ ಎಂದು ವರದಿಯು ಬಹಿರಂಗಗೊಳಿಸಿದೆ.

ಆದರೆ ವರದಿಯನ್ನು ಸಮರ್ಥಿಸಿಕೊಂಡಿರುವ ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ ಮುಂಗಂಟಿವಾರ್ ಅವರು, ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆಗಳು ಇನ್ನೂ ಅನುಷ್ಠಾನಗೊಂಡಿಲ್ಲ ಮತ್ತು ಮುಂಬರುವ ದಿನಗಳಲ್ಲಿ ಈ ಕ್ಷೇತ್ರಗಳು ಪ್ರಗತಿಯನ್ನು ದಾಖಲಿಸಲಿವೆ ಎಂದಿದ್ದಾರೆ.

  2017-18ಕ್ಕೆ ಹೋಲಿಸಿದರೆ ವ್ಯಾಪಾರ,ಹೋಟೆಲ್,ಸಂಪರ್ಕ,ಹಣಕಾಸು ಮತ್ತು ವೃತ್ತಿಪರ ಸೇವೆಗಳು,ಸಾರ್ವಜನಿಕ ಆಡಳಿತ,ರಕ್ಷಣೆ ಮತ್ತು ಇತರ ಸೇವಾಕ್ಷೇತ್ರಗಳಲ್ಲಿ ಬೆಳವಣಿಗೆಯು ಹೆಚ್ಚಲಿದೆೆ ಎಂದು ಅಂದಾಜಿಸಲಾಗಿದೆ. ಈ ಕ್ಷೇತ್ರಗಲ್ಲಿಯೂ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎನ್ನುವುದನ್ನು ಇದು ಸೂಚಿಸುತ್ತದೆ. ಆಯ್ದ ಕ್ಷೇತ್ರಗಳಲ್ಲಿ ಕೇವಲ ಹೂಡಿಕೆಗಳ ಮೂಲಕವೇ ಬೆಳವಣಿಗೆಯನ್ನು ನೋಡುವಂತಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News