×
Ad

ಗಡಿಪಾರು ಮಸೂದೆ ಮಂಡನೆಗಾಗಿ ಕ್ಷಮೆ ಕೋರಿದ ಹಾಂಕಾಂಗ್ ನಾಯಕಿ

Update: 2019-06-18 22:40 IST

 ಹಾಂಕಾಂಗ್, ಜೂ. 18: ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡುವ ಮಸೂದೆಯನ್ನು ಮಂಡಿಸಿರುವುದಕ್ಕಾಗಿ ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್ ಮಂಗಳವಾರ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಈ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆ ತುಂಬಾ ಕಡಿಮೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ಮಸೂದೆಯನ್ನು ವಿರೋಧಿಸಿ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗೆ ಇಳಿದು ಪ್ರತಿಭಟಿಸಿದ ಬಳಿಕ ಅವರು ಕ್ಷಮೆ ಕೋರಿದ್ದಾರೆ.

‘‘ಈ ಪರಿಸ್ಥಿತಿಯ ಹೆಚ್ಚಿನ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ’’ ಎಂದು ಲ್ಯಾಮ್ ಹೇಳಿದರು. ‘‘ಇದು ಸಮಾಜದಲ್ಲಿ ವಿವಾದಗಳಿಗೆ ಮತ್ತು ಕಳವಳಗಳಿಗೆ ಕಾರಣವಾಯಿತು. ಇದಕ್ಕಾಗಿ ನಾನು ಹಾಂಕಾಂಗ್‌ನ ಎಲ್ಲ ಜನರಿಂದ ಪ್ರಾಮಾಣಿಕ ಕ್ಷಮೆ ಕೋರುತ್ತೇನೆ’’ ಎಂದರು.

ಲ್ಯಾಮ್ ಅಧಿಕಾರದಿಂದ ಕೆಳಗಿಳಿಯಬೇಕು ಹಾಗೂ ಮಸೂದೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎಂಬುದಾಗಿ ಪ್ರತಿಭಟನಕಾರರು ಒತ್ತಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News