ಈ ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,500 ರೂ. ಭತ್ಯೆ !

Update: 2019-06-19 06:39 GMT

ಜೈಪುರ್ : ಪದವೀಧರರಾಗಿರುವ ಅಥವಾ ತತ್ಸಮಾನ ಡಿಗ್ರಿ ಹೊಂದಿರುವ ನಿರುದ್ಯೋಗಿಗಳಿಗೆ ರಾಜಸ್ಥಾನ ಸರಕಾರ 3,500 ರೂ. ತನಕ ನಿರುದ್ಯೋಗ ಭತ್ಯೆ ನೀಡಲು ನಿರ್ಧರಿಸಿದೆ.

ಅರ್ಹ ನಿರುದ್ಯೋಗಿ ಯುವಕರಿಗೆ ಮುಖ್ಯಮಂತ್ರಿಯ ಯುವ ಸಂಬಲ್ ಯೋಜನೆಯನ್ವಯ ಈ ವರ್ಷದ ಫೆಬ್ರವರಿಯಿಂದ ಅನ್ವಯವಾಗುವಂತೆ  ಈ ಭತ್ಯೆ ದೊರೆಯುವುದು ಎಂದು ಸರಕಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

ಈ ಹಿಂದೆ ಜಾರಿಯಲ್ಲಿದ್ದ ಅಕ್ಷತ್ ಯೋಜನೆಗೆ ಹೊಸ ಹೆಸರು ನೀಡಿ ಈಗಿನ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ಈ ಯೊಜನೆ ಜಾರಿಗೊಳಿಸಿದೆ. ಈ ಯೋಜನೆಯ ಫಲಾನುಭವಿಗಳು ರಾಜಸ್ಥಾನದವರಾಗಿರಬೇಕು. ಈ ಯೋಜನೆಯಂತೆ ಪುರುಷರು ಮಾಸಿಕ 3,000 ರೂ. ಭತ್ಯೆ ಗಳಿಸಲಿದ್ದರೆ ಮಹಿಳೆಯರು ಹಾಗೂ ಭಿನ್ನ ಸಾಮರ್ಥ್ಯದವರು ಮಾಸಿಕ ರೂ 3,500 ಪಡೆಯಲಿದ್ದಾರೆ.

ಈ ಭತ್ಯೆಯನ್ನು ಎರಡು ವರ್ಷಗಳ ತನಕ ಅಥವಾ ಫಲಾನುಭವಿಗಳಿಗೆ ಉದ್ಯೋಗ ಲಭಿಸುವ ತನಕ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News