ಬಿಜೆಪಿ ಸಂಸದ ಸನ್ನಿ ಡಿಯೋಲ್‌ಗೆ ಚುನಾವಣಾ ಆಯೋಗದ ನೋಟಿಸ್

Update: 2019-06-19 18:17 GMT

ಹೊಸದಿಲ್ಲಿ, ಜೂ. ಜೂ. 19: ನಟ ಹಾಗೂ ಗುರುದಾಸ್‌ಪುರದ ಸಂಸದ ಸನ್ನಿ ಡಿಯೋಲ್ ಬೆಂಬಲದಿಂದ ನಡೆಯುತ್ತಿರುವ ಫೇಸ್‌ಬುಕ್ ಪೇಜ್‌ನ ಕುರಿತು ತನ್ನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ವಿಫಲವಾದ ಬಳಿಕ ಚುನಾವಣಾ ಆಯೋಗ ಚುನಾವಣಾ ವೆಚ್ಚದೊಂದಿಗೆ 1.74 ಲಕ್ಷ ರೂಪಾಯಿ ಸೇರಿಸುವಂತೆ ಸನ್ನಿ ಡಿಯೋಲ್‌ಗೆ ನಿರ್ದೇಶಿಸಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭ ಪ್ರಚಾರಕ್ಕೆ ಕಾನೂನು ಮಿತಿಯ ವೆಚ್ಚ ರೂ.70 ಲಕ್ಷ ದಾಟಿರುವುದು ಪತ್ತೆಯಾದ ಬಳಿಕ ಸನ್ನಿ ಡಿಯೋಲ್‌ಗೆ ಚುನಾವಣಾ ಆಯೋಗ ಈ ನಿರ್ದೇಶನ ನೀಡಿದೆ. ಗುರುದಾಸ್‌ಪುರದ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಉಪ ಆಯುಕ್ತ ವಿಪುಲ್ ಉಜ್ವಲ್ ನೀಡಿರುವ ಚುನಾವಣಾ ವೆಚ್ಚದ ಲೆಕ್ಕಾಚಾರವನ್ನು ಮರು ಹೊಂದಾಣಿಕೆ ಮಾಡುವಂತೆ ಚುನಾವಣಾ ಆಯೋಗ ಸನ್ನಿ ಡಿಯೋಲ್‌ಗೆ ಸೂಚಿಸಿದೆ. 

ಸನ್ನಿ ಡಿಯೋಲ್ ಅವರ ಚುನಾವಣಾ ವೆಚ್ಚ 70 ಲಕ್ಷ ರೂಪಾಯಿಯ ಮಿತಿಯನ್ನು ಮೀರಿದೆ ಎಂದು ಉಜ್ವಲ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸನ್ನಿ ಡಿಯೋಲ್ ಅವರು ಗುರುದಾಸ್‌ಪುರ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಖಡ್ ಅವರನ್ನು 82,459 ಮತಗಳ ಅಂತರದಿಂದ ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News