2022ರಲ್ಲಿ ಮೂಲಸೌಕರ್ಯ ಒದಗಿಸಲು ಕೇಂದ್ರದಿಂದ ಹಲವು ಯೋಜನೆ: ರಾಷ್ಟ್ರಪತಿ

Update: 2019-06-20 06:26 GMT

ಹೊಸದಿಲ್ಲಿ, ಜೂ.20: ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಿದರು. ತನ್ನ ಭಾಷಣದಲ್ಲಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ರಾಷ್ಟಪತಿ ಭಾಷಣದ ಮುಖ್ಯಾಂಶಗಳು

*ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 60 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ದೇಶದ ಜನತೆ ಸ್ಪಷ್ಟ ಜನಾದೇಶ ನೀಡಿದ್ದಾರೆ.ಸಬ್‌ಕಾ ಸಾಥ್, ಸಬ್‌ಕಾ ವಿಕಾಸಕ್ಕಾಗಿ ಸರಕಾರ ಕೆಲಸ ಮಾಡಲಿದೆ.

*2022ರಲ್ಲಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಯನ್ನು ಕೇಂದ್ರ ಹಮ್ಮಿಕೊಂಡಿದೆ.

* 2022ರಲ್ಲಿ ಸ್ವಾತಂತ್ರದ 75ನೇ ವರ್ಷದಲ್ಲಿ ನವಭಾರತ ನಿರ್ಮಾಣದತ್ತ ಹಲವು ಯೋಜನೆ ರೂಪಿಸಲಾಗಿದೆ.

 *ಹುತಾತ್ಮ ಯೋಧರ ಮಕ್ಕಳ ಶಿಷ್ಯ ವೇತನ ಹೆಚ್ಚಳ, ದೇಶದ ಭದ್ರತೆಗೆ ನಿಯೋಜನೆಗೊಂಡಿರುವ ಯೋಧರಿಗಾಗಿ ರಾಷ್ಟ್ರೀಯ ರಕ್ಷಣಾ ನಿಧಿ ಹೆಚ್ಚಳ.

*2022ರೊಳಗೆ ರೈತರ ಆದಾಯದಲ್ಲಿ ದ್ವಿಗುಣಗೊಳಿಸಲು ಯೋಜನೆ

*ಜನಧನ್ ಯೋಜನೆಯ ಮೂಲಕ ಬ್ಯಾಂಕಿಂಗ್ ಸೇವೆ ವಿಸ್ತರಣೆ

*ಅನ್ನದಾತರ ಅಭಿವೃದ್ಧಿಗಾಗಿ ಕಿಸಾನ್ ಸಮ್ಮಾನ್ ಯೋಜನೆ. ಈ ಯೋಜನೆಗೆ 3 ತಿಂಗಳಲ್ಲಿ 12,000 ಕೋಟಿ ರೂ. ಅನುದಾನ. ಯೋಜನೆಗೆ 90,000 ಕೋ.ರೂ. ಖರ್ಚು.

*ಸಣ್ಣ ವ್ಯಾಪಾರಿಗಳ, ಉದ್ದಿಮೆದಾರರ ಪಿಂಚಣಿ ಹೆಚ್ಚಳ

*ಸಣ್ಣ ವ್ಯಾಪಾರಿಗಳ ಹಾಗೂ ರೈತರ ಪಿಂಚಣಿ ಯೋಜನೆ ಆರಂಭ

*2022ರೊಳಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆಲ್ತ್ ಸೆಂಟರ್

*ದೇಶದ 112 ಜಿಲ್ಲೆಗಳ ಗ್ರಾಮೀಣ ಭಾಗಗಗಳ ಅಭಿವೃದ್ಧಿಗೆ ಯೋಜನೆ

*ನೀರಿನ ಸಂರಕ್ಷಣೆಗೆ ಜಲಶಕ್ತಿ ಸಚಿವಾಲಯ

*ಕೃಷಿ ಉತ್ಪನ್ನ ಹೆಚ್ಚಳಕ್ಕೆ 25 ಲಕ್ಷ ಕೋಟಿಯ ಯೋಜನೆ

*ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತದಿಂದ 50 ಕೋಟಿ ಬಡವರಿಗೆ ಲಾಭ. ಈಗಾಗಲೇ 26 ಲಕ್ಷ ಬಡವರು ಈ ಯೋಜನೆಯ ಲಾಭ ಪಡೆದಿದ್ದಾರೆ.

*ನಮ್ಮ ಸರಕಾರ ಬಡವರಿಗೆ ವಸತಿ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲಿದ್ದು, ಬಡವರನ್ನು ಸಶಕ್ತರನ್ನಾಗಿಸುವ ಮೂಲಕ ಬಡತನ ನಿವಾರಣೆ ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News