ಜಮ್ಮು ಕಾಶ್ಮೀರದಲ್ಲಿ ಯೋಧರಿಗೆ ಸವಾಲಾಗುತ್ತಿದೆ ಉಕ್ಕು ಲೇಪಿತ ಗುಂಡುಗಳು

Update: 2019-06-21 15:56 GMT

ಶ್ರೀನಗರ, ಜೂ. 21: ಜಮ್ಮು ಹಾಗೂ ಕಾಶ್ಮೀರದಲ್ಲಿ ಉಗ್ರರು ಗರಿಷ್ಠ ಹಾನಿ ಉಂಟು ಮಾಡುವ ಉಕ್ಕು ಲೇಪಿತ ಗುಂಡುಗಳನ್ನು ಬಳಸುತ್ತಿದ್ದು, ಇದರಿಂದ ಯೋಧರು ಬೆದರಿಕೆ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆ ಇಲ್ಲಿ ತತ್‌ಕ್ಷಣ ಹಾಗೂ ದೀರ್ಘಾವಧಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

 ರಾಜ್ಯದಲ್ಲಿ ಉಗ್ರರು ಉಕ್ಕು ಲೇಪಿತ ಗುಂಡುಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗೆ ಇರುವ ಬೆದರಿಕೆ ನಿವಾರಿಸಲು ಹಲವು ತತ್‌ಕ್ಷಣದ ಹಾಗೂ ದೀರ್ಘಾವಧಿಯ ಪರಿಹಾರಗಳನ್ನು ಕೈಗೊಳ್ಳಬೇಕಿದೆ ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತತ್‌ಕ್ಷಣದ ಕ್ರಮಗಳಲ್ಲಿ ಉಗ್ರ ತಡೆ ಕಾರ್ಯಾಚರಣೆ ಸಂದರ್ಭ ಬಳಸುವ ರಕ್ಷಣಾ ಫಲಕಗಳನ್ನು ಇನ್ನಷ್ಟು ಬಲಪಡಿಸುವುದು ಕೂಡ ಸೇರಿದೆ.

ದೀರ್ಘಾವದಿಯ ಕ್ರಮಗಳಲ್ಲಿ ನಿಯೋಜಿತ ಯೋಧರು ಬಳಸುವ ಹೆಲ್ಮೆಟ್, ಜಾಕೆಟ್ ಸಹಿತ ಗುಂಡು ನಿರೋಧಕ ಕವಚ ಮೇಲ್ದರ್ಜೀಕರಣ ಹಾಗೂ ಸುಧಾರಣೆ ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಎನ್‌ಕೌಂಟರ್‌ಲ್ಲಿ ಹತನಾದ ಉಗ್ರನಲ್ಲಿ ಪತ್ತೆಯಾದ ರೈಫಲ್ ಮ್ಯಾಗಝಿನ್‌ನಲ್ಲಿ 18 ಸಜೀವ ಉಕ್ಕು ಲೇಪಿತ ಗುಂಡುಗಳು ಇದ್ದುವು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News