11 ವರ್ಷದ ಬಾಲಕಿಯ ಅತ್ಯಾಚಾರಗೈದು, ಕಲ್ಲಿನಿಂದ ತಲೆ ಜಜ್ಜಿ ಹತ್ಯೆ
Update: 2019-06-22 19:18 IST
ಉನ್ನಾವೊ,ಜೂ.22: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಸಫಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ 11ರ ಹರೆಯದ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಲಾಗಿದೆ.
ತನ್ನ ಪುತ್ರಿ ಮನೆಯ ಹೊರಗೆ ಮಲಗಿದ್ದು,ತಾನು ಮಧ್ಯರಾತ್ರಿಯಲ್ಲಿ ಎದ್ದಾಗ ಆಕೆ ಹಾಸಿಗೆಯಲ್ಲಿರಲಿಲ್ಲ. ಆಕೆ ಬಹಿರ್ದೆಸೆಗಾಗಿ ಸಮೀಪದ ಹೊಲಕ್ಕೆ ಹೋಗಿರಬಹುದೆಂದು ತಾನು ಭಾವಿಸಿದ್ದೆ, ಆದರೆ ಬಹಳ ಹೊತ್ತಿನವರೆಗೂ ಆಕೆ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ತೋಟವೊಂದರಲ್ಲಿ ಆಕೆಯ ಶವ ಪತ್ತೆಯಾಗಿದೆ. ಆಕೆಯ ತಲೆಯನ್ನು ಇಟ್ಟಿಗೆಗಳಿಂದ ಜಜ್ಜಲಾಗಿತ್ತು ಎಂದು ಬಾಲಕಿಯ ತಂದೆ ತಿಳಿಸಿದರು. ಬಾಲಕಿಯ ಶವವು ನಗ್ನವಾಗಿದ್ದು,ಕುತ್ತಿಗೆಯ ಸುತ್ತ ಮತ್ತು ಗುಪ್ತಾಂಗಗಳ ಬಳಿ ಗಾಯಗಳಾಗಿರುವುದು ಕಂಡು ಬಂದಿದೆ.
ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಿದ್ದಾರೆ.