ಬಿಜೆಪಿ ಆಡಳಿತದ ಮಹಾರಾಷ್ಟ್ರದಲ್ಲಿ 3 ವರ್ಷಗಳಲ್ಲಿ 12 ಸಾವಿರ ರೈತರ ಆತ್ಮಹತ್ಯೆ

Update: 2019-06-22 14:17 GMT

ಮುಂಬೈ, ಜೂ. 22: 2015-2018ರ ನಡುವೆ 12 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶುಕ್ರವಾರ ವಿಧಾನ ಸಭೆಗೆ ಮಾಹಿತಿ ನೀಡಲಾಯಿತು. ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 12,021 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಜಿಲ್ಲಾ ಮಟ್ಟದ ಸಮಿತಿಯ ಪರಿಶೀಲನೆ ಬಳಿಕ ಸರಕಾರದ ನೆರವಿಗೆ 6,888 ಪ್ರಕರಣಗಳು ಮಾತ್ರ ಅರ್ಹ ಎಂದು ಗುರುತಿಸಲಾಗಿತ್ತು ಎಂದು ಪರಿಹಾರ ಹಾಗೂ ಪುನರ್ವಸತಿ ಸಚಿವ ಸುಭಾಷ್ ದೇಶ್‌ಮುಖ್ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಇದುವರೆಗೆ, 6,845 ರೈತರ ಕುಟುಂಬದ ಸದಸ್ಯರಿಗೆ ತಲಾ 1 ಲಕ್ಷ ರೂಪಾಯಿ ಹಣಕಾಸಿನ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜನವರಿಯಿಂದ 2019 ಮಾರ್ಚ್ ವರೆಗೆ 610 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 192 ಪ್ರಕರಣಗಳು ಹಣಕಾಸು ನೆರವಿಗೆ ಅರ್ಹವಾದವು ಎಂದು ಅವರು ತಿಳಿಸಿದ್ದಾರೆ. ಅರ್ಹವಾದ 192ರಲ್ಲಿ 182 ಪ್ರಕರಣಗಳಲ್ಲಿ ರೈತರ ಕುಟುಂಬದ ಸದಸ್ಯರಿಗೆ ಆರ್ಥಿಕ ನೆರವು ನೀಡಲಾಗಿದೆ. ಉಳಿದ ಪ್ರಕರಣಗಳು ಅರ್ಹವೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ದೇಶ್‌ಮುಖ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News