ಪ್ರಧಾನಿ ಮೋದಿ ಯೋಗ ದಿನ ಆಚರಿಸಿದ ರಾಂಚಿಯಲ್ಲಿ ನೀರಿಗಾಗಿ ಇರಿತ, ಹೊಡೆದಾಟ

Update: 2019-06-22 14:53 GMT
 ಫೋಟೊ ಕೃಪೆ: The Indian Express

ಹೊಸದಿಲ್ಲಿ, ಜೂ.22: ನಿನ್ನೆ ಯೋಗ ದಿನಾಚರಣೆಯಂಗವಾಗಿ ದೇಶಾದ್ಯಂತ ಯೋಗಾಸನ ಪ್ರದರ್ಶನಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ರಾಂಚಿಯಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ್ದ ಅವರು, “ನಾವು ಯೋಗ ನಗರಗಳಿಂದ ಹಳ್ಳಿಗಳಿಗೆ ಮತ್ತು ಬುಡಕಟ್ಟು ಪ್ರದೇಶಗಳಿಗೆ ತಲುಪುವಂತೆ ಮಾಡಬೇಕು. ಆರೋಗ್ಯಯುತ ದೇಹ, ಸ್ಥಿರ ಮನಸ್ಸು ಯೋಗದ ಸಾರವಾಗಿದೆ” ಎಂದಿದ್ದರು.

ಆದರೆ ಪ್ರಧಾನಿ ಮೋದಿ ಯೋಗಾಸನ ಪ್ರದರ್ಶಿಸಿದ ರಾಂಚಿಯಲ್ಲಿ ಜನರಿಗೆ ಆರೋಗ್ಯಯುತ ಶರೀರಕ್ಕೆ ಬೇಕಾದ ನೀರು ಎಂಬ ಪ್ರಾಥಮಿಕ ಮೂಲಭೂತ ಸೌಲಭ್ಯ ಪಡೆಯುವ ಯೋಗವಿದೆಯೇ ಎಂದರೆ ಇಲ್ಲ ಎನ್ನುವ ಉತ್ತರ ಲಭಿಸುತ್ತದೆ!.

ಹೌದು ರಾಂಚಿಯಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಜೂನ್ 6ರಂದು ನೀರಿನ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ 24 ವರ್ಷದ ಸುನೀಲ್ ಯಾದವ್ ಸೇರಿ 4 ಮಂದಿ ಚೂರಿ ಇರಿತಕ್ಕೊಳಗಾಗಿದ್ದಾರೆ.

ನೀರು ತುಂಬಿಸುವ ವಿಚಾರದಲ್ಲಿ ಆರಂಭವಾದ ಜಗಳ ಚೂರಿಯಿಂದ ಇರಿಯುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಕೊಲೆಯತ್ನ ಪ್ರಕರಣವೂ ದಾಖಲಾಗಿದೆ.

ಬೇಸಿಗೆ ಕಾಲದಲ್ಲಿ ರಾಂಚಿಯಲ್ಲಿ ನೀರಿಗಾಗಿ ಹೊಡೆದಾಟಗಳು ಸಾಮಾನ್ಯವಾಗಿಬಿಟ್ಟಿದೆ. ಕಂಕೆ, ರುಕ್ಕಾ, ಹಟಿಯಾ ಡ್ಯಾಮ್ ಗಳಲ್ಲಿ ಅವಶ್ಯಕತೆಗೆ ಬೇಕಾದಷ್ಟು ನೀರಿದ್ದರೂ ಹಲವು ಕಾಲನಿಗಳ ಅವಶ್ಯಕತೆಯನ್ನು ಪೂರೈಸಲಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News