ಅತ್ಯಾಚಾರ ಸಂತ್ರಸ್ತೆ ಗರ್ಭಪಾತ ಮಾಡಿಕೊಳ್ಳಲು ವೈದ್ಯಕೀಯ ಮಂಡಳಿ ಅನುಮತಿ ಬೇಕಿಲ್ಲ: ಮದ್ರಾಸ್ ಹೈಕೋರ್ಟ್

Update: 2019-06-22 15:04 GMT

ಚೆನ್ನೈ, ಜೂ. 22: ಇಪ್ಪತು ವಾರಗಳು ಮೀರಿದ ಬಳಿಕ ಗರ್ಭಪಾತ ಮಾಡಿಸಿಕೊಳ್ಳಲು ಅತ್ಯಾಚಾರ ಸಂತ್ರಸ್ತೆ ವೈದ್ಯಕೀಯ ಮಂಡಳಿ ಅಥವಾ ನ್ಯಾಯಾಂಗವನ್ನು ಸಂಪರ್ಕಿಸುವ ಅಗತ್ಯ ಇಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಶುಕ್ರವಾರ ಹೇಳಿದೆ.

ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಈ ತೀರ್ಪು ನೀಡಿದರು. ಅನಗತ್ಯ ಗರ್ಭ ಹೊಂದಿರುವ ಎಲ್ಲ ಪ್ರಕರಣಗಳಲ್ಲಿ ಗರ್ಭದ ಅವಧಿ 20 ವಾರಗಳಿಗಿಂತ ಹೆಚ್ಚಾಗಿದ್ದರೆ, ಸಂತ್ರಸ್ತೆ ವೈದ್ಯಕೀಯ ಮಂಡಳಿ ಸಂಪರ್ಕಿಸುವ ಅಗತ್ಯ ಇಲ್ಲ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ವೈದ್ಯಕೀಯ ಗರ್ಭಪಾತ ಕಾಯ್ದೆ 1970ರ ಕಲಂ 3ರ ನಿಯಮದ ಪ್ರಕಾರ ಇಂತಹ ಸಂದರ್ಭ ಗರ್ಭಪಾತ ಮಾಡಿಸಿಕೊಳ್ಳಬಹುದು. ಸಂತ್ರಸ್ತೆ ಅನಗತ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಿಲ್ಲ ಎಂದು ಅವರು ಹೇಳಿದ್ದಾರೆ. ನವೀದ್ ಅಹ್ಮದ್ ಎಂಬ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭವತಿಯಾಗಿದ್ದ ಸಂತ್ರಸ್ತೆ (ದೂರುದಾರೆ) ಪ್ರಕರಣವನ್ನು ಸ್ಥಳೀಯ ಪೊಲೀಸ್‌ನಿಂದ ಸಿಐಡಿಗೆ ವರ್ಗಾಯಿಸಲು ನಿರ್ದೇಶಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆರೋಪಿ ತಾನೆಸಗಿದ ಅತ್ಯಾಚಾರದ ವೀಡಿಯೊ ದಾಖಲೆ ಮಾಡಿದ್ದ ಹಾಗೂ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅಲ್ಲದೆ, ಗರ್ಭಪಾತ ಮಾಡಿಸಿಕೊಳ್ಳಲು ಸರಕಾರಿ ಹೆರಿಗೆ ಹಾಗೂ ಸ್ತ್ರೀರೋಗ ವಿಭಾಗಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News