ವಿಶ್ವಕಪ್‌ನಲ್ಲಿ ಕೊಹ್ಲಿ ‘ಹ್ಯಾಟ್ರಿಕ್’ ಸಾಧನೆ

Update: 2019-06-22 16:02 GMT

ಸೌತಾಂಪ್ಟನ್ , ಜೂ.22: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಹಾಟ್ರಿಕ್ ಅರ್ಧಶತಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ನಾಯಕರಾಗಿ ದಾಖಲೆ ಬರೆದಿದ್ದಾರೆ.

  ವಿಶ್ವಕಪ್‌ನ 28ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶನಿವಾರ ಕೊಹ್ಲಿ 67 ರನ್ ಗಳಿಸಿ ಔಟಾದರು. ಅವರು ಈ ಸಾಧನೆಯೊಂದಿಗೆ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

 1992ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತದ ನಾಯಕರಾಗಿದ್ದ ಮುಹಮ್ಮದ್ ಅಝರುದ್ದೀನ್ ಮೂರು ಅರ್ಧಶತಕಗಳನ್ನು ಗಳಿಸಿ ದಾಖಲೆ ಬರೆದಿದ್ದರು.

 ಕೊಹ್ಲಿ ಆಸ್ಟ್ರೇಲಿಯ ವಿರುದ್ಧ 82ರನ್ ಮತ್ತು ಪಾಕಿಸ್ತಾನ ವಿರುದ್ಧ 77 ರನ್ ಗಳಿಸಿದ್ದರು. ಸೌತಾಂಪ್ಟನ್‌ನಲ್ಲಿ 48 ಎಸೆತಗಳಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದರು.

  ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಬೇಗನೇ ನಿರ್ಗಮಿಸಿದಾಗ ಕೊಹ್ಲಿ ಎರಡನೇ ವಿಕೆಟ್‌ಗೆ ರಾಹುಲ್‌ಯಾದರು. ರಾಹುಲ್ ಜೊತೆ 57ರನ್ ಮತ್ತು ವಿಜಯ್ ಶಂಕರ್ ಜೊತೆ ಮೂರನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನೀಡಿದರು.                           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News