ಬೆಳ್ಳಿತೆರೆಯಲ್ಲಿ 'ಉಧಂ ಸಿಂಗ್' ಜೀವನಗಾಥೆ

Update: 2019-06-23 05:53 GMT

ಪೀಕೂ ಖ್ಯಾತಿಯ ಶೂಜಿತ್ ಸರ್ಕಾರ್,ಇದೀಗ ಬಯೋಪಿಕ್ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಸ್ವಾತಂತ್ರ ಸಂಗ್ರಾಮದ ಕರಾಳ ಅಧ್ಯಾಯವೆನಿಸಿರುವ ಜಲಿಯಾನ್‌ವಾಲಾಬಾಗ್ ಹತ್ಯಾಕಾಂಡದ ಸೂತ್ರಧಾರಿ, ಬ್ರಿಟಿಷ್ ಆಳ್ವಿಕೆಯ ಪಂಜಾಬ್‌ನಲ್ಲಿ ಗವರ್ನರ್ ಆಗಿದ್ದ ಮೈಕೆಲ್ ಡಯರ್‌ನನ್ನು ಹತ್ಯೆಗೈದ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಉಧಂ ಸಿಂಗ್‌ನ ಜೀವನಚರಿತ್ರೆಯನ್ನು ಆಧರಿಸಿ ಅವರು ಚಿತ್ರ ನಿರ್ಮಿ ಸುತ್ತಿದ್ದಾರೆ. ಭಾರೀ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಬಯೋಪಿಕ್‌ನಲ್ಲಿ, ಉರಿ- ದಿ ಸರ್ಜಿಕಲ್ ಸ್ಟ್ರೈಕ್ ಖ್ಯಾತಿಯ ನಟ ವಿಕಿಕೌಶಲ್ ಉಧಂ ಸಿಂಗ್‌ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಉಧಂ ಸಿಂಗ್ ಬಯೋಪಿಕ್ ಈ ವರ್ಷದ ಆರಂಭದಲ್ಲಿ ಲಂಡನ್‌ನಲ್ಲಿ ಸೆಟ್ಟೇರಿತ್ತು. ಶೂಜಿತ್ ಸರ್ಕಾರ್ ಅವರ ನಿರ್ದೇಶನದ ಅಕ್ಟೋಬರ್, ಕಳೆದ ವರ್ಷ ತೆರೆಕಂಡಿತ್ತು. ಇದೀಗ ಅವರು ಉದಂ ಸಿಂಗ್ ಬಯೋಪಿಕ್‌ಜೊತೆಗೆ ಗುಲಾಬೊ ಸಿತಾಬೊ ಎಂಬ ಕೌಟುಂಬಿಕ ಹಾಸ್ಯದ ಚಿತ್ರವೊಂದನ್ನು ಪೂರ್ಣ ಗೊಳಿಸುತ್ತಿದ್ದಾರೆ. ಗುಲಾಬೊ ಸಿತಾಬೊದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಆಯುಷ್ಮಾನ್ ಖುರಾನಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ಈ ನಡುವೆ ಉದಂಸಿಂಗ್‌ಚಿತ್ರದ ನಾಯಕ ವಿಕಿಕೌಶಲ್ ಅಭಿನಯದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಅಣಿಯಾಗುತ್ತಿವೆ. ತಖ್ತ್, ಭೂತ್-ಭಾಗ 1 ಮತ್ತು ಆದಿತ್ಯಧರ್ ನಿರ್ದೇಶನದ ಇನ್ನೊಂದು ಚಿತ್ರದಲ್ಲಿ ವಿಕಿಕೌಶಲ್ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News