ಆಫ್ರಿಕ ತಂಡದ ಗೆಲುವಿಗೆ 309 ರನ್‌ಗಳ ಸವಾಲು ನೀಡಿದ ಪಾಕ್

Update: 2019-06-23 14:01 GMT

ಲಂಡನ್ , ಜೂ. 23: ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ 30ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 308 ರನ್ ಗಳಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಬಾಬರ್ ಅಝಮ್ (69) ಮತ್ತು ಹಾರೀಸ್ ಸೊಹೈಲ್ (89) ಅರ್ಧಶತಕಗಳ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

 ಆರಂಭಿಕ ದಾಂಡಿಗರಾದ ಇಮಾಮ್ ಉಲ್ ಹಕ್ ಮತ್ತು ಫಾಕರ್ ಝಮಾನ್ ತಲಾ 44 ರನ್‌ಗಳ ಕೊಡುಗೆ ನೀಡಿದರು. ಅವರಿಗೆ ದಕ್ಷಿಣ ಆಫ್ರಿಕದ ಸ್ಪಿನ್ನರ್ ಇಮ್ರಾನ್ ತಾಹಿರ್ ಅರ್ಧಶತಕ ನಿರಾಕರಿಸಿದರು.

ಮುಹಮ್ಮದ್ ಹಫೀಝ್ 20ರನ್, ಇಮಾದ್ ವಸೀಮ್ 23ರನ್, ವಹಾಬ್ ರಿಯಾಝ್ 4ರನ್, ಸರ್ಫರಾಝ್ ಅಹ್ಮದ್ ಔಟಾಗದೆ 2ರನ್ ಮತ್ತು ಶಾದಬ್ ಖಾನ್ ಔಟಾಗದೆ 1ರನ್ ಸೇರಿಸಿದರು.

ದಕ್ಷಿಣ ಆಫ್ರಿಕದ ಲುಂಗಿ ಗಿಡಿ 64ಕ್ಕೆ 3, ಇಮ್ರಾನ್ ತಾಹಿರ್ 41ಕ್ಕೆ 2 ವಿಕೆಟ್, ಆ್ಯಂಡ್ಲೆ ಫೆಹ್ಲುಕ್ವಾಯೊ ಮತ್ತು ಏಡೆನ್ ಮಕ್ರಾಮ್ ತಲಾ 1 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News