ಬಾಂಗ್ಲಾಕ್ಕೆ ಅಫ್ಘಾನಿಸ್ತಾನ ವಿರುದ್ದ ಮಾಡು ಇಲ್ಲವೆ ಮಡಿ ಪಂದ್ಯ

Update: 2019-06-23 18:42 GMT

   ಸೌತ್‌ಹ್ಯಾಂಪ್ಟನ್, ಜೂ.23: ಸೆಮಿಫೈನಲ್‌ಗೇರುವ ಕನಸು ಕಾಣುತ್ತಾ ಒತ್ತಡಕ್ಕೊಳಗಾಗಿರುವ ಬಾಂಗ್ಲಾದೇಶ ತಂಡ ಸೋಮವಾರ ನಡೆಯಲಿರುವ ವಿಶ್ವಕಪ್‌ನ 31ನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಜಯಿಸಿದ ಹಿನ್ನೆಲೆಯಲ್ಲಿ ಬಾಂಗ್ಲಾ ತಂಡದ ಸೆಮಿಫೈನಲ್ ಗೇರುವ ಪ್ರಯತ್ನಕ್ಕೆ ತಾತ್ಕಾಲಿಕ ಅಡ್ಡಿಯಾಗಿದೆ. ಈ ಕಾರಣದಿಂದಾಗಿ ಅದು ಕೆಳಕ್ರಮಾಂಕದಲ್ಲಿರುವ ಅಫ್ಘಾನಿಸ್ತಾನವನ್ನು ಮಣಿಸಬೇಕಾಗಿರುವುದು ಅಗತ್ಯ. ಆದರೆ ಭಾರತದ ಆಟಗಾರರು ಅಫ್ಘಾನಿಸ್ತಾನ ವಿರುದ್ಧ ಪ್ರಯಾಸದ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಭಾರತದ ವಿರುದ್ಧ ಅಫ್ಘಾನಿಸ್ತಾನ 11 ರನ್‌ಗಳ ಸೋಲು ಅನುಭವಿಸಿತ್ತು. ಅಫ್ಘಾನಿಸ್ತಾನ ಪ್ರಥಮ ಗೆಲುವಿಗಾಗಿ ಪ್ರಯತ್ನ ಮುಂದುವರಿಸಲಿದೆ. ಬಾಂಗ್ಲಾದೇಶ 5 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದೆ. 2 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 1 ಪಂದ್ಯ ರದ್ದಾಗಿದೆ. ಈ ಕಾರಣದಿಂದಾಗಿ 5 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಆದರೆ ಅಫ್ಘಾನಿಸ್ತಾನ ಎಲ್ಲ 6 ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಅಂಕದ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಶ್ರೀಲಂಕಾ 6 ಪಂದ್ಯಗಳಲ್ಲಿ 2ರಲ್ಲಿ ಜಯ ಗಳಿಸಿದೆ.2ರಲ್ಲಿ ಸೋಲು ಅನುಭವಿಸಿದೆ. 2 ಪಂದ್ಯಗಳು ಮಳೆಯಿಂದ ರದ್ದಾಗಿರುವ ಹಿನ್ನೆಲೆಯಲ್ಲಿ ಸುಲಭವಾಗಿ 2 ಅಂಕಗಳನ್ನು ಖಾತೆಗೆ ಸೇರಿಸಿಕೊಂಡಿದೆ. ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಬಾಂಗ್ಲಾವನ್ನು ಹಿಂದಿಕ್ಕಿ 5ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News