ಭದ್ರತಾ ಕೊಠಡಿಯಲ್ಲಿದ್ದ ಇವಿಎಂಗಳ ಭಾಗಗಳು ನಾಪತ್ತೆಯಾಗಿದ್ದವು: ಆರ್ ಟಿಐ ಮಾಹಿತಿಯಿಂದ ಬಹಿರಂಗ

Update: 2019-06-24 14:15 GMT

ಭೋಪಾಲ, ಜೂ. 24: ಇವಿಎಂನ ಪ್ರಮುಖ ಭಾಗವಾದ ಬ್ಯಾಲೆಟ್ ಯೂನಿಟ್ (ಬಿಯು) ಹಾಗೂ ಪ್ರತ್ಯೇಕಿಸಬಹುದಾದ ಮೆಮೊರಿ ಮಾಡ್ಯುಲ್ (ಡಿಎಂಎಂ) ಮಧ್ಯಪ್ರದೇಶದ ಕೆಲವು ಜಿಲ್ಲೆಗಳ ಭದ್ರತಾ ಕೊಠಡಿಯಿಂದ ನಾಪತ್ತೆಯಾಗಿವೆ ಎಂದು ಆರ್‌ಟಿಐಗೆ ನೀಡಲಾದ ದಾಖಲೆಗಳು ತಿಳಿಸಿವೆ.

ಆದರೆ, ಈ ಇವಿಎಂಗಳನ್ನು ರಾಜ್ಯದಲ್ಲಿ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಳಸಲಾಗಿದೆಯೇ ಎಂಬ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ.

ಇವಿಎಂಗಳ ನಿರ್ವಹಣೆ ಹಾಗೂ ಭದ್ರತೆ ಬಗ್ಗೆ ಜಿಲ್ಲಾಡಳಿತದಿಂದ ಸ್ವೀಕರಿಸಲಾದ ಇತ್ತೀಚೆಗಿನ ವರದಿ ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಹೋರಾಟಗಾರ ಅಜಯ್ ದುಬೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ವರ್ಷ ಎಪ್ರಿಲ್ ಹಾಗೂ ಜೂನ್‌ನಲ್ಲಿ ಸಿದ್ಧಪಡಿಸಲಾದ ಈ ಪರಿಶೀಲನಾ ವರದಿಯನ್ನು ಅಜಯ್ ದುಬೆ ಅವರಿಗೆ ನೀಡಿದೆ.

ಉಮರಿಯಾದ ದಾಸ್ತಾನು ಕೊಠಡಿ ಪರಿಶೀಲಿಸಿದಾಗ 9 ಡಿಎಂಎಂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪ್ರತಿಕ್ರಿಯೆ ಹೇಳಿದೆ. ಆದರೆ, ಡಿಎಂಎಂ ನಾಪತ್ತೆಯಾಗಿರುವುದಕ್ಕೆ ಕಾರಣವನ್ನು ತಿಳಿಸಿಲ್ಲ.

ಎಂಎಸ್‌ಆರ್ (ಮಾಸ್ಟರ್ ಸ್ಟಾಕ್ ರಿಜಿಸ್ಟರ್) ಪ್ರಕಾರ ನರಸಿಂಗಪುರ ಜಿಲ್ಲೆಯಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಭದ್ರತಾ ಕೊಠಡಿಯಲ್ಲಿ 2,709 ಡಿಎಂಎಂ ಇರಿಸಲಾಗಿತ್ತು ಎಂದು ಭಾವಿಸಲಾಗಿದೆ.

ಪರಿಶೀಲನೆ ಸಂದರ್ಭ 2,508 ಡಿಎಂಎಂಗಳು ನಾಪತ್ತೆಯಾಗಿವೆ ಎಂದು ಜಿಲ್ಲಾಡಳಿತ ಅಜಯ್ ದುಬೆ ಅವರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News