ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 84,000ಕ್ಕೂ ಅಧಿಕ ಹುದ್ದೆಗಳು ಖಾಲಿ

Update: 2019-06-25 15:33 GMT

ಹೊಸದಿಲ್ಲಿ,ಜೂ.25: ಕೇಂದ್ರಿಯ ಸಶಸ್ತ್ರ ಪಡೆಗಳಲ್ಲಿ ಮಂಜೂರಾಗಿರುವ 9,99,795 ಹುದ್ದೆಗಳ ಪೈಕಿ 84,000ಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದು,ಅವುಗಳನ್ನು ಭರ್ತಿ ಮಾಡಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದೆ.

ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಎಸ್‌ಎಸ್‌ಬಿ, ಐಟಿಬಿಪಿ ಮತ್ತು ಅಸ್ಸಾಂ ರೈಫಲ್ಸ್ ಸೇರಿವೆ.

ನಿವೃತ್ತಿ, ಸ್ವಯಂ ನಿವೃತ್ತಿ ಮತ್ತು ಸೇವಾವಧಿಯಲ್ಲಿ ಸಾವುಗಳಿಂದಾಗಿ ಪ್ರತಿವರ್ಷ ವಿವಿಧ ದರ್ಜೆಗಳ ಶೇ.10ರಷ್ಟು ಹುದ್ದೆಗಳು ತೆರವಾಗುತ್ತಿವೆ ಮತ್ತು ಈ ಹುದ್ದೆಗಳನ್ನು ತುಂಬಲು ಸ್ಥಾಪಿತ ಪದ್ಧತಿಯು ಅಸ್ತಿತ್ವದಲ್ಲಿದೆ. ಹಾಲಿ 84,037 ಹುದ್ದೆಗಳು ಖಾಲಿಯಿವೆ. ಸಿಆರ್‌ಪಿಎಫ್‌ನಲ್ಲಿ ಹೊಸದಾಗಿ ಸೃಷ್ಟಿಯಾಗಿರುವ ಹುದ್ದೆಗಳು ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರವು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಗೃಹ ಸಚಿವಾಲಯವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News